ಶಾರುಖ್ ಬಾಲಿವುಡ್ ಪ್ರವೇಶಿಸಿದಾಗ ಈಗ ಅವರ ಹೀರೋಯಿನ್ ಆಗಿರುವವರಿಗೆ ಎಷ್ಟು ವಯಸ್ಸಾಗಿತ್ತು ?
ಬಾಲಿವುಡ್ ಜಗತ್ತಿನಲ್ಲಿ ಮೂರು ದಶಕಗಳಿಂದ ರೊಮ್ಯಾನ್ಸ್ ಕಿಂಗ್ ಎನಿಸಿಕೊಂಡವರು ಶಾರುಖ್ ಖಾನ್. ಕಾಜೋಲ್‌ನಿಂದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಹೀಗೆ ಪ್ರಮುಖ ತಾರೆಯರ ಜತೆ ಕನಿಷ್ಠ 25 ವರ್ಷಗಳಿಂದ ಪರದೆ ಮೇಲೆ ಪ್ರಣಯದಾಟ ಮೂಲಕ ಮನಗೆದ್ದವರು.
1.
ರಯೀಸ್ ಮೂಲಕ ಪಾಕಿಸ್ತಾನದ ಎಳೆ ಬೆಡಗಿ ಮಹಿರಾ ಖಾನ್ ಜತೆ ರೊಮಾನ್ಸ್ ಸನ್ನಿವೇಶದಲ್ಲಿ ಮಿಂಚಿದವರು. ಈಕೆ ಹುಟ್ಟಿದ್ದು 1982ರ ಡಿಸೆಂಬರ್‌ನಲ್ಲಿ. ಕಿಂಗ್ ಖಾನ್ ಬಾಲಿವುಡ್‌ಗೆ ರಂಗಪ್ರವೇಶ ಮಾಡಿದಾಗ ಈಕೆಯ ವಯಸ್ಸು ಕೇವಲ ಏಳು!
2.
ದೀಪಿಕಾ ಪಡುಕೋಣೆ ಜತೆ ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಈಯರ್‌ನಂತ ಹಿಟ್ ಚಿತ್ರ ನೀಡಿದ ಖಾನ್ ಮೊದಲ ಚಿತ್ರದಲ್ಲಿ ನಟಿಸಿದಾಗ ಇವರ ವಯಸ್ಸು ಕೇವಲ ಆರು. ದೀಪಿಕಾ ಹುಟ್ಟಿದ್ದು 1986ರಲ್ಲಿ.
3.
ಬಾಲಿವುಡ್‌ನಲ್ಲಿ "ನೋ ಲಿಪ್ ಲಾಕ್" ಸಂಪ್ರದಾಯವನ್ನು ಮುರಿದು ಕತ್ರಿಕಾ ಕೈಫ್ ಜತೆ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಶಾರೂಖ್, ಈ 19ರ ಬೆಡಗಿ ಜತೆ ಬಾಕ್ಸ್ ಆಫೀಸ್ ದಾಖಲೆಗಳನ್ನೇ ಸ್ಥಾಪಿಸಿದರು. ಶಾರುಖ್ ಮೊದಲ ಚಿತ್ರದಲ್ಲಿ ಕಾಣಿಸಿಕೊಂಡಾಗ ಕೈಫ್ ವಯಸ್ಸು ಕೇವಲ 9.
4.
ದಿವ್ಯ ಭಾರ್ತಿ ಜತೆ ದೀವಾನಾದಲ್ಲಿ ಬೆಳ್ಳಿತೆರೆಗೆ ಶಾರುಖ್ ಲಗ್ಗೆ ಇಟ್ಟಾಗ ಮತ್ತೊಬ್ಬ ಬೆಡಗಿ ದೀಪಿಕಾಗೆ ಆರು ವರ್ಷ. ಜಬ್ ತಕ್ ಹೇ ಜಾನ್‌ನಲ್ಲಿ ಖಾನ್‌ಗೆ ಜತೆಯಾಗಿದ್ದ ಅನುಷ್ಕಾ ಶರ್ಮಾಗೆ 1992ರಲ್ಲಿ ಕೇವಲ ನಾಲ್ಕು ವರ್ಷ.
ಇದೀಗ ಹೊಸ ಸುದ್ದಿ ಏನು ಗೊತ್ತೇ?
5.
ಇಮ್ತಿಯಾಜ್ ಅಲಿ ಅವರ ಹೊಸ ಚಿತ್ರದಲ್ಲಿ ಎಸ್‌ಆರ್‌ಕೆ ತಮಗಿಂತ 23 ವರ್ಷ ಕಿರಿಯ ನಟಿ ಜತೆ ಪ್ರಣಯ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಇನ್ನೂ ಅಚ್ಚರಿಯ ವಿಷಯ ಖಾನ್- ಅಲಿಯಾ ಬಟ್ ಜೋಡಿಯದು. ಖಾನ್ ಚಿತ್ರರಂಗಕ್ಕೆ ಕಾಲಿಟ್ಟಾಗ ಅಲಿಯಾ ಇನ್ನೂ ಹುಟ್ಟಿರಲೇ ಇಲ್ಲ.