×
Ad

ಎಂಟಿ, ಕಮಲ್‌ ವಿರುದ್ಧ ಸಂಘಪರಿವಾರ ದಾಳಿ ಮಾಡಿದಾಗ ಎಲ್ಲಿದ್ದೀರಿ?: ಸೋಶಿಯಲ್ ಮೀಡಿಯದಲ್ಲಿ ಪ್ರಶ್ನೆಗಳ ಸುರಿಮಳೆ

Update: 2017-01-24 12:15 IST

ತಿರುವನಂತಪುರಂ,ಜ.24: ಎಂಟಿ ವಾಸುದೇವನ್ ನಾಯರ್, ನಿರ್ದೇಶಕ ಕಮಲ್ ವಿರುದ್ಧ ಫ್ಯಾಶಿಸ್ಟ್ ದಾಳಿ ನಡೆದಾಗ ಬಾಯಿ ಮುಚ್ಚಿಕೂತಿದ್ದ ಮಮ್ಮುಟ್ಟಿ ಜಲ್ಲಿಕಟ್ಟು ವಿಷಯದಲ್ಲಿ ತಮಿಳರಿಗೆ ಬೆಂಬಲಿಸಿ ಮಾತಾಡಿದ ವೀಡಿಯೊ ಸೋಶಿಯಲ್ ಮೀಡಿಯದಲ್ಲಿ ಭಾರೀ ಟೀಕೆಗೊಳಗಾಗುತ್ತಿದ್ದಾರೆ. ಮೆಗಾಸ್ಟಾರ್ ವರ್ತನೆ ಸಮಯಸಾಧಕತನ ಮತ್ತು ದ್ವಂದ್ವದ್ದೆಂದು ಸೋಶಿಯಲ್ ಮೀಡಿಯದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯೆಂದು ವರದಿಯೊಂದು ತಿಳಿಸಿದೆ. ತಮಿಳ್ನಾಡಿನ ಜಲ್ಲಿಕಟ್ಟು ಕುರಿತು ಮಮ್ಮುಟ್ಟಿ ಭಾವನಾತ್ಮಕವಾಗಿ ಮಾತಾಡಿದ್ದಾರೆ. ಬೆಂಬಲ ಸೂಚಿಸಿದ್ದಾರೆ. "ಜಲ್ಲಿಕಟ್ಟು ಹೋರಾಟಭಾರತಕ್ಕೆ ಮಾದರಿಯಾದುದು. ಅಭಿನಂದನೆಗಳು ಗೆಳೆಯರೆ. ಯಾವುದೇ ರಾಜಕೀಯ ಹಸ್ತಕ್ಷೇಪಗಳಿಲ್ಲದೆ. ಯಾವುದೇ ನಾಯಕನ ಮಾರ್ಗದರ್ಶನವಿಲ್ಲದೆ, ಧರ್ಮದ, ಜಾತಿಯ ವಂಶದ ಆಧಾರದ ಯಾವುದೇ ತಾರತಮ್ಯಗಳಿಲ್ಲದೆ. ಆಕ್ರಮಣಕಾರಿ ದಾರಿಯನ್ನು ತುಳಿಯದೆ ಲಕ್ಷಾಂತರ ತಮಿಳರು ಒಂದು ವಿಷಯದಲ್ಲಿ ತಮಿಳ್ನಾಡಿನಲ್ಲಿ ಒಗ್ಗೂಡಿದರು" ಎಂದು ಮಮ್ಮುಟ್ಟಿ ಜಲ್ಲಿಕಟ್ಟುಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಪ್ರತಿಕ್ರಿಯಿಸಿದ್ದಾರೆ.

 ನಿರ್ದೇಶಕ ಕಮಲ್, ಸಾಹಿತಿ ಎಂಟಿ ವಾಸುದೇವನ್‌ನಾಯಕರ್ ವಿರುದ್ಧ ಟೀಕಾಸ್ತ್ರ ಪ್ರಯೋಗಗೊಳ್ಳುತ್ತಿದ್ದಾಗ ಮೆಗಾಸ್ಟಾರ್ ದಿವ್ಯಮೌನಕ್ಕೆ ಶರಣಾಗಿದ್ದರು. ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಮಮ್ಮುಟ್ಟಿಯ ವರ್ತನೆಯನ್ನು ಚಲನಚಿತ್ರ ನಿರೂಪಕ ಹಾಗೂ ಪ್ರಗತಿಪರ ಕಲಾ ಸಾಹಿತ್ಯ ಸಂಘದ ರಾಜ್ಯ ಕಾರ್ಯದರ್ಶಿ ಜಿಪಿ ರಾಮಚಂದ್ರನ್ ಮುಂತಾದವರು ಟೀಕಿಸಿದ್ದಾರೆ.

 ಕಮಲ್ ಮತ್ತು ಎಂಟಿಗೆ ಈ ಮಹಾನಟನ ಬೆಂಬಲ ಯಾವಾಗ ಸಿಗುತ್ತದೆ ಎಂದು ಅಮೀರ್ ಕಲ್ಲಂಪುರ ಎಂಬವರು ಪ್ರಶ್ನಿಸಿದ್ದಾರೆ. ತಮಿಳ್ನಾಡಿನ ನಿಮ್ಮ ಸಂಸ್ಥೆಗಳ ಅಸ್ತಿತ್ವ ಉಳಿಸಲಿಕ್ಕಾಗಿ ಈ ಪ್ರತಿಕ್ರಿಯೆಯೇ ಎಂದು ಮಮ್ಮುಟ್ಟಿಯನ್ನು ಸುಧೀಶ ಅಲೋಶಿಯಸ್ ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ. ಎಡಪಕ್ಷ ಬೆಂಬಲಿಗ, ಕೈರಳಿ ಟಿವಿಯ ದೀರ್ಘಕಾಲ ಚೇರ್‌ಮೆನ್ ಕೇರಳದ ಪ್ರಿಯ ನಟ ಆಗಿದ್ದು ಎಂಟಿ ಮತ್ತು ಕಮಲ್‌ರನ್ನು ಸಂಘಪರಿವಾರ ಬೇಟೆಯಾಡುವಾಗ ನೀವೇಕೆ ಅಡಗಿಕೂತಿರಿ ಎಂದು ಮುಹಮ್ಮದ್ ನರಿಕುನ್ನ್ ಎಂಬವರು ಪ್ರಶ್ನಿಸಿದ್ದಾರೆ.

ಎಂಟಿ,ಕಮಲ್ ವಿರುದ್ಧ ಅಪಪ್ರಚಾರವನ್ನು ಆಡೂರ್ ಗೋಪಾಲಕೃಷ್ಣನ್, ಝಕರಿಯ, ಆಶೀಷ್ ಅಬು ಮುಂತಾದವರು ಪ್ರತಿಭಟಿಸಿದ್ದರು. ಫೆಪ್ಕೊದ ನೇತೃತ್ವದಲ್ಲಿ ಸಿನೆಮಾನಟರು, ತಂತ್ರಜ್ಞರು ಪ್ರತಿಭಟನೆ ನಡೆಯಿತು. ಆದರೂ ಮಮ್ಮುಟ್ಟಿ ಮೌನವಾಗಿದ್ದರು ಎಂದು ಮಮ್ಮುಟ್ಟಿ ವಿರುದ್ಧ ಹಲವರ ಟೀಕಾಪ್ರಹಾರ ಹರಿದು ಬಂದಿದೆ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News