ಎಲ್ಲ ಬರಹಗಾರರು, ಚಿಂತಕರು ಪಾಕಿಸ್ತಾನಕ್ಕೆ ಹೋದರೆ ಏನಾಗುತ್ತೆ ?
ತಿರುವನಂತಪುರಂ,ಜ.24: ಭಾರತದ ಸ್ವತಂತ್ರ ನಿಲುವಿನ ಕಲಾಕಾರರು, ಬರಹಗಾರರು ಹಾಗೂ ಚಿಂತಕರು ಪಾಕಿಸ್ತಾನಕ್ಕೆ ಹೋಗಿಬಿಟ್ಟರೆ ಪಾಕಿಸ್ತಾನ ಶೀಘ್ರದಲ್ಲಿ ಏಷ್ಯದ ಸಾಂಸ್ಕೃತಿಕ ರಾಜಧಾನಿಯಾಗಿಬದಲಾದೀತು ಎಂದು ಕವಿ. ಪ್ರೊ. ಕೆ.ಸಚ್ಚಿದಾನಂದನ್ ಹೇಳಿದರು. ರಾಜ ನಗ್ನನಿದ್ದಾನೆಂದು ಕೂಗಿ ಹೇಳುವ ಸಾಂಸ್ಕೃತಿಕ ಕಾರ್ಯಕರ್ತರನ್ನೆಲ್ಲ ಪಾಕಿಸ್ತಾನಕ್ಕೆ ಹೋಗಲಿ ಎಂದು ಪ್ರಧಾನಿ ನರೇಂದ್ರಮೋದಿ, ಬಿಜೆಪಿ, ಸಂಘಪರಿವಾರದ ಜನರು ಹೇಳುತ್ತಿರುವುದರಿಂದ ನಾನು ಹೀಗೆ ಹೇಳುತ್ತಿದ್ದೇನೆ ಎಂದು ಸಚ್ಚಿದಾನಂದನ್ ತಿಳಿಸಿದ್ದಾರೆ.
ಆಲ್ ಇಂಡಿಯಾ ಇನ್ಶುರೆನ್ಸ್ ಎಂಪ್ಲಾಯೀಸ್ ಅಸೋಸಿಯೇಶನ್‌ನ 24ನೆ ರಾಷ್ಟ್ರೀಯ ಸಮಾವೇಶದ ಪ್ರಯುಕ್ತ ಕೊಚ್ಚಿಯಲ್ಲಿ ನಡೆದ ಸಮ್ಮೇಳನದಲ್ಲಿ ಸಂಸ್ಕೃತಿ ಮತ್ತು ಜನರ ಒಗ್ಗಟ್ಟು ಎಂಬ ವಿಷಯದಲ್ಲಿ ಅವರು ಮಾತಾಡುತ್ತಿದ್ದರು. ಎಂಎಫ್ ಹುಸೈನ್, ಯು ಅರ್ ಅನಂತಮೂರ್ತಿ, ಈಗ ಶಾರುಕ್ ಖಾನ್, ನಂದಿತಾ ದಾಸ್‌ರಿಂದ ಹಿಡಿದು ಕಮರವರೆಗೂ ಪಾಕಿಸ್ತಾನಕ್ಕೆ ಹೋಗಬೇಕೆಂದು ಸಂಘಪರಿವಾರದ ನಿಲುವಾಗಿದೆ. ಬೇರೆ ಧರ್ಮದವರನ್ನು ವಿಶೇಷವಾಗಿ ಮುಸ್ಲಿಮರನ್ನು ಬೇರೆ ರಾಷ್ಟ್ರಗಳಿಂದ ಬಂದವರೆಂದು ಮುದ್ರೆಯೊತ್ತಿ ವೈರವನ್ನು ಹರಡುತ್ತಿದ್ದಾರೆ. ಭಾರತದ ಧಾರ್ಮಿಕ ವೈವಿಧ್ಯವನ್ನು ನಾಶಪಡಿಸಲು ಸಂಘಪರಿವಾರ ಪ್ರವರ್ತಿಸುತ್ತಿದೆ ಎಂದು ಸಚ್ಚಿದಾನಂದನ್ ಹೇಳಿದ್ದಾರೆ.
ತಮಗೆ ಹಿತವಲ್ಲದ್ದೆಲ್ಲವೂ ಇಲ್ಲಿ ಬೇಡ ವೆಂದು ಇವರ ನಿಲುವು ಆಗಿದೆ. ಇದಕ್ಕೆ ಗೋಮಾಂಸ ನಿಷೇಧ, ಪುರಾವೆ. ಸಂಘಪರಿವಾರದ ಇಂದಿನ ಹಿಂದುತ್ವ ಸಂಕುಚಿತ ಹಾಗೂ ಅಸಹಿಷ್ಣುತೆಯ ಮೂರ್ತರೂಪವಾಗಿದೆ. ಹಿಂದೂ ತತ್ವದ ಮೋಸದಲ್ಲಿ ಮಧ್ಯಮವರ್ಗದವರು ಹೆಚ್ಚು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಜೀವನದ್ದಲ್ಲ ಮರಣದ ಆರಾಧಕರು ಸಂಘಪರಿವಾರಿಗಳು. ಇದೇ ರೀತಿ ಐಸಿಸ್‌ಕೂಡಾ ಧರ್ಮಕ್ಕಾಗಿ ಸಾಯಿರಿ ಎಂದು ಕರೆ ನೀಡುತ್ತದೆ ಎಂದು ಸಚ್ಚಿದಾನಂದನ್ ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.