ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಭ್ರಷ್ಟಾಚಾರವಿದೆ: ಆ್ಯಂಟನಿ
Update: 2017-01-24 14:55 IST
ಕೊಚ್ಚಿ,ಜ.24: ಕೇರಳದ ಖಾಸಗಿ ಶಿಕ್ಷಣ ಕ್ಷೇತ್ರ ಮತ್ತು ಅನುದಾನಿತ ವಲಯಗಳಲ್ಲಿಯೂ ಭಾರೀ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ತಿಳಿಸಿದ್ದಾರೆ. ಈ ಸಂಸ್ಥೆಗಳ ಮೇಲೆ ವಿಜಿಲೆನ್ಸ್( ಭ್ರಷ್ಟಾಚಾರ ನಿಗ್ರಹ ದಳ) ನಿಗಾವಿರಿಸಬೇಕು. ಭ್ರಷ್ಟಾಚಾರ ವಿರುದ್ಧ ಕ್ರಮವನ್ನು ವಿಜಿಲೆನ್ಸ್ ವಿದ್ಯಾಸಂಸ್ಥೆಗಳಿಂದ ಆರಂಭಿಸಬೇಕು ಎಂದು ಆ್ಯಂಟನಿ ಆಗ್ರಹಿಸಿದ್ದಾರೆ.
ಕೆಲವು ಶಾಲಾ ಆಡಳಿತದವರು ದೋಚುವ ಕೆಲಸ ಮಾಡುತ್ತಾರೆ ಎಂದು ಎರ್ನಾಕುಲಂ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎ.ಸಿ. ಜೋಸ್ ಅನುಸ್ಮರಣಾ ಸಮ್ಮೇಳನದಲ್ಲಿ ಮಾತಾಡುತ್ತಾ ಆ್ಯಂಟನಿ ಅಭಿಪ್ರಾಯ ಪಟ್ಟಿದ್ದಾರೆ. ವಿದ್ಯಾರ್ಥಿ ರಾಜಕೀಯ ಇಲ್ಲದ್ದು, ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಸಮಸ್ಯೆಗಳುಂಟಾಗುವುದಕ್ಕೆ ಕಾರಣವಾಗಿದೆ. ಕ್ಯಾಂಪಸ್‌ಗಳು ಜಾತಿ,ಮತಕೋಮುವಾದದ ಕೇಂದ್ರಗಳಾಗಿ ಬದಲಾಗಿವೆ.. ಗುರುವಿನ ಕುರ್ಚಿ ಸುಟ್ಟುಹಾಕುವಂತಹ ಅಕ್ರಮ ಚಟುವಟಿಕೆಗಳು ಮೃಗೀಯ ವರ್ತನೆಗಳೆಂದು ಆ್ಯಂಟನಿ ಹೇಳಿದರೆಂದು ವರದಿತಿಳಿಸಿದೆ.