×
Ad

ಸರ್ವೆ ಆಫ್ ಇಂಡಿಯಾದಿಂದ ಎವರೆಸ್ಟ್ ಶಿಖರದ ಎತ್ತರದ ಮರುಮಾಪನ

Update: 2017-01-24 19:24 IST

ಹೈದರಾಬಾದ್,ಜ.24: ಎರಡು ವರ್ಷಗಳ ಹಿಂದೆ ನೇಪಾಲದಲ್ಲಿ ಸಂಭವಿಸಿದ್ದ ವಿನಾಶಕಾರಿ ಭೂಕಂಪದ ಬಳಿಕ ವಿಶ್ವದ ಅತ್ಯಂತ ಎತ್ತರದ ಪರ್ವತ ಶಿಖರವೆಂಬ ಹೆಗ್ಗಳಿಕೆ ಪಡೆದಿರುವ ಹಿಮಾಲಯದ ಎವರೆಸ್ಟ್ ಶಿಖರವು ಕುಗ್ಗುತ್ತಿದೆ ಎಂದು ವಿಜ್ಞಾನಿಗಳ ಒಂದು ವರ್ಗವು ಶಂಕೆಯನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರ್ವೆ ಆಫ್ ಇಂಡಿಯಾ ಶೀಘ್ರವೇ ಅದರ ಮರುಮಾಪನ ಯೋಜನೆಗೆ ಚಾಲನೆ ನೀಡಲಿದೆ.

ಅಗತ್ಯ ಪೂರ್ವಾನುಮತಿಗಳನ್ನು ಪಡೆದುಕೊಳ್ಳಲಾಗಿರುವ ಈ ಯೋಜನೆಯು ಭವಿಷ್ಯದ ವೈಜ್ಞಾನಿಕ ಅಧ್ಯಯನಗಳಿಗೂ ನೆರವಾಗಲಿದೆ ಎಂದು ಸರ್ವೇಯರ್ ಜನರಲ್ ಆಫ್ ಇಂಡಿಯಾ ಸ್ವರ್ಣ ಸುಬ್ಬರಾವ್ ಅವರು ಮಂಗಳವಾರ ಇಲ್ಲಿ ತಿಳಿಸಿದರು. ಇನ್ನು ಎರಡು ತಿಂಗಳಲ್ಲಿ ಈ ಯೋಜನೆ ಆರಂಭವಾಗಲಿದೆ ಎಂದರು.

ನಾವು ಎವರೆಸ್ಟ್ ಶಿಖರಕ್ಕೆ ನಮ್ಮ ತಂಡವನ್ನು ಕಳುಹಿಸಲಿದ್ದೇವೆ. ನನಗೆ ನೆನಪಿರುವಂತೆ 1855ರಲ್ಲಿ ಎವರೆಸ್ಟ್‌ನ ಎತ್ತರವನ್ನು ಘೋಷಿಸಲಾಗಿತ್ತು. ಇತರರೂ ಈ ಎತ್ತರವನ್ನು ಲೆಕ್ಕ ಹಾಕಿದ್ದರು. ಆದರೆ ಇಂದಿಗೂ ಸರ್ವೆ ಆಫ್ ಇಂಡಿಯಾ ನೀಡಿರುವ 29,028 ಅಡಿ ಎತ್ತರವನ್ನೇ ನಿಖರವಾದುದು ಎಂದು ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News