×
Ad

ಜಲ್ಲಿಕಟ್ಟು ಹೋರಾಟ ನಿಲ್ಲಿಸಬೇಕು: ರಜನೀಕಾಂತ್

Update: 2017-01-25 11:35 IST

ಚೆನ್ನೈ, ಜ.25: ಜನರು ಜಲ್ಲಿಕಟ್ಟು ಹೋರಾಟವನ್ನು ಕೊನೆಗೊಳಿಸಬೇಕೆಂದು ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ವಿನಂತಿಸಿದ್ದಾರೆ. ಈಗ ನೋವು ತರಿಸುವ ರೀತಿಯಲ್ಲಿ ಹೋರಾಟ ಸಾಗುತ್ತಿದೆ. ಹೋರಾಟವನ್ನು ಕೊನೆಗೊಳಿಸುವ ಮೂಲಕ ಯುವಜನರು ಶಾಂತಿ ಕಾಪಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ನಟನ ಮನವಿಗೆ ಓಗೊಟ್ಟು ಪ್ರತಿಭಟನಾಕಾರರು ಹೋರಾಟ ಸ್ಥಗಿತಗೊಳಿಸಬಹುದೆಂದು ನಿರೀಕ್ಷೆ ವ್ಯಕ್ತವಾಗಿದೆ.

 ಈ ಮೊದಲು ಕಮಲ್ ಹಾಸನ್ ಮುಂತಾದವರು ಹೋರಾಟ ಕೊನೆಗೊಳಿಸಲು ಜನರಿಗೆ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಪ್ರತಿಭಟನೆಗಳಿಗಾಗಿ ಪ್ರತಿಪಕ್ಷಗಳನ್ನು ದೂರಿದ್ದು, ಪ್ರತಿಪಕ್ಷಗಳು ಜಲ್ಲಿಕಟ್ಟು ಹೋರಾಟದಿಂದ ಲಾಭವನ್ನು ಪಡೆಯಲು ಹವಣಿಸುತ್ತಿವೆ ಎಂದು ಆರೋಪಿಸಿದ್ದಾರೆ. ಚೆನ್ನೈ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ಸೋಮವಾರ ಆಕ್ರಮಾಸಕ್ತವಾಗಿತ್ತು. ಸ್ಥಳೀಯ ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ನಂತರ ಪೊಲೀಸರು ಬಲಪ್ರಯೋಗಿಸಿ ಪ್ರತಿಭಟನಾಕಾರರನ್ನುಚದುರಿಸಿದ್ದರು ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News