×
Ad

ರಈಸ್ : ಹೊಸ ಶಾರುಖ್ , ಹಳೆ ಫಾರ್ಮುಲಾ

Update: 2017-01-25 13:47 IST

ನಿರ್ದೇಶಕ : ರಾಹುಲ್ ಧೊಲಕಿಯ

ತಾರಾಗಣ : ಶಾರುಖ್ ಖಾನ್, ನವಾಝಿದ್ದೀನ್ ಸಿದ್ದೀಖಿ, ಮಹಿರಾ ಖಾನ್, ಮುಹಮ್ಮದ್ ಜೀಶನ್ ಅಯ್ಯುಬ್

ಬಡ ಕುಟುಂಬದ ಹುಡುಗೊಬ್ಬ ಡ್ರಗ್ಸ್ ಗಳ ಕಳ್ಳ ಸಾಗಣೆ ಮೂಲಕ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟುವ ಕಥೆಯ ಚಿತ್ರವಿದು. ಆತನ ಜಾಣತನ ಹಾಗೂ ಇಂಗದ ದಾಹವೇ ಆತನ ಬಂಡವಾಳ. ಆತನಿಗೊಬ್ಬ ಬಲಗೈ ಬಂಟ, ಸಹೋದರನಿದ್ದಂತೆ. ಆದರೆ ಆತ ಶಕ್ತಿಶಾಲಿಯಾಗುತ್ತಿದ್ದಂತೆಯೇ ವೈರಿಗಳು ಹುಟ್ಟಿಕೊಳ್ಳುತ್ತಾರೆ.ಇತರ ಅಪಾಯಕಾರಿ ಸ್ಮಗ್ಲರ್ ಗಳೊಂದಿಗೆ ಒಂದು ಸಿಂಡಿಕೇಟ್ ಸ್ಥಾಪಿಸಿ ಅದರ ಮುಖ್ಯಸ್ಥನಾಗುವ ಕನಸು ಆತನದು. ಆತ ಅದಕ್ಕಾಗಿ ಲಂಚ ನೀಡುತ್ತಾನೆ, ಕೊಲೆಗಳನ್ನು ಮಾಡುತ್ತಾನೆ, ಜೈಲಿಗೆ ಹೋಗುತ್ತಾನೆ. ಸ್ಥಳೀಯರ ಬಗ್ಗೆ ಸಹಾನುಭೂತಿ ತೋರಿಸುತ್ತಾನೆ ಹಾಗೂ ಚುನಾವಣೆ ಸ್ಪರ್ಧಿಸಲೂ ನಿರ್ಧರಿಸುತ್ತಾನೆ.

ರಾಹುಲ್ ಧೊಲಕಿಯ ಅವರ ಈ ಚಿತ್ರವು ಕೊಲಂಬಿಯನ್ ಡ್ರಗ್ಸ್ ದೊರೆ ಪಾಬ್ಲೊ ಎಸ್ಕೊಬಾರ್ಜೀವನಾಧರಿತ ಟಿವಿ ಧಾರಾವಾಹಿಯಿಂದ ಪ್ರೇರಿತವಾಗಿದೆಯೆಂದು ಅದನ್ನು ನೋಡಿದ ಯಾರಿಗೂ ಅನಿಸದೇ ಇರದು. ಈ ಚಿತ್ರದಲ್ಲಿ ರಈಸ್ ಆಗಿ ಶಾರುಖ್ ಗುಜರಾತ್ ನ ಎಸ್ಕೊಬಾರ್ ಆಗಿ ವಿಜೃಂಭಿಸುತ್ತಾರೆ. ವೇಗವಾಗಿ ಮುನ್ನಡೆಯುವ ಈ ಚಿತ್ರದಲ್ಲಿ ಕನಿಷ್ಠ ಅರ್ಧ ಡಜನ್ ಹಾಡುಗಳಿವೆ. 20 ಟಿವಿ ಎಪಿಸೋಡುಗಳನ್ನು ಮೂರು ಗಂಟೆಯೊಳಗೆತುರುಕಿದಂತಿದೆ ಈ ಚಿತ್ರ.

ಬಡತನದಲ್ಲಿ ಹುಟ್ಟಿದ ಆ ಹುಡುಗನಿಗೆ ಬ್ಯಾಟರಿ ಎಂದು ಕನ್ನಡಕಧಾರಿಗಳಿಗೆ ಉಪಯೋಗಿಸುವ ಅಡ್ಡ ಹೆಸರಿನಿಂದ ಆತನಿಗೆ ಮುಜುಗರವಾಗುತ್ತಿತ್ತು. ಒಂದೇ ಏಟಿಗೆ ಚಿತ್ರದಲ್ಲಿ ದೊಡ್ಡವನಾದ ಈತ ಯಾವುದೇ ವ್ಯವಹಾರ ಸಣ್ಣದಲ್ಲ ಎಂಬ ಅಮ್ಮನ ಮಾತುಗಳು ಹಾಗೂ ತನ್ನ ಸ್ಮಗ್ಲಿಂಗ್ ಗುರು ಜಯರಾಜ್ ಸೇಠಿಯಿಂದ ಪ್ರಭಾವಿತನಾಗಿ ಜಗತ್ತನ್ನೇ ಗೆಲ್ಲಲು ಹೊರಡುತ್ತಾನೆ. ಈ ನಡುವೆ ಹಲವರೊಡನೆ ಜಗಳವನ್ನೂ ಆಡುತ್ತಾನೆ. ನಾಯಕ ನಟಿಯಾಗಿ ಮಹಿರಾ ಖಾನ್ ಅವರು ಶಾರುಖ್ ಅವರ ಪ್ರಿಯತಮೆ ಹಾಗೂ ನಂತರ ಪತ್ನಿಯಾಗಿ ಕಾಣಿಸುತ್ತಾರೆ. ಚಿತ್ರದಲ್ಲಿ ರಈಸ್ ತನ್ನ ಪತ್ನಿಯನ್ನು ತನ್ನ ಮಗುವನ್ನು ಬೆಳೆಸಲು ಮನೆಯಲ್ಲಿಯೇ ಇರಿಸುತ್ತಾನೆ. ಕೆಲವೊಮ್ಮೆ ಆಕೆಯ ಮೇಲೆ ಸಿಟ್ಟಿನಿಂದ ಕಿಡಿ ಕಾರುವುದನ್ನುಹಾಗೂ ಕೆಲವೊಮ್ಮೆ ರೊಮಾನ್ಸ್ ಮಾಡುವುದನ್ನು ನೋಡಬಹುದಾಗಿದೆ.

ಶಾರುಖ್ ಅವರು ಎಂದಿನಂತೆ ತಮ್ಮ ಅಭಿನಯದಿಂದ ಗೆಲ್ಲುತ್ತಾರೆ. 51 ವರ್ಷವಾದರೂ ತಮ್ಮ ನೃತ್ಯ ಚಾತುರ್ಯದಿಂದಲೂ ಅವರು ಗಮನ ಸೆಳೆಯುತ್ತಾರೆ. ನವಾಝುದ್ದೀನ್ ಸಿದ್ದೀಖಿ ಕೂಡ ತಮ್ಮ ಪೊಲೀಸ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಜೀಶನ್ ಅಯ್ಯುಬ್ ಅವರ ರಈಸ್ ಬಲಗೈ ಬಂಟನಾಗಿ ನಟಿಸಿದ್ದಾರೆ.

ಚಿತ್ರದ ಪ್ರಮುಖ ಪಾತ್ರಧಾರಿಗಳೆಲ್ಲರೂ ಮುಸ್ಲಿಮರಾಗಿರುವುದು ಈ ಚಿತ್ರದ ವಿಶೇಷವಾಗಿದ್ದು ಇಂದಿನ ಅಸಹಿಷ್ಣುತೆಯ ಸನ್ನಿವೇಶದಲ್ಲಿ ಈ ಚಿತ್ರದ ಮೂಲಕ ಶಾರುಖ್ ತನ್ನದೇ ಆದ ಸಂದೇಶವೊಂದನ್ನು ನೀಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News