×
Ad

ಥಿಯೇಟರ್‌ನಲ್ಲಿ ಪರಸ್ಪರ ಸ್ಪರ್ಧೆಗಿಳಿದಿರುವ ರಈಸ್ ಮತ್ತು ಕಾಬಿಲ್‌ರ ಟ್ವೀಟ್ ವಿನಿಮಯ ಅತ್ಯಂತ....

Update: 2017-01-25 15:56 IST

ಈಗಿನ್ನೂ ಜನವರಿ ನಡೆಯುತ್ತಿದೆ, ಅದಾಗಲೇ ಬಹುಶಃ ಈ ವರ್ಷದ ಅತ್ಯಂತ ದೊಡ್ಡ ಬಾಕ್ಸ್ ಆಫೀಸ್ ಕಿತ್ತಾಟಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಚರ್ಚೆಗಳು ಮತ್ತು ಮಧ್ಯರಾತ್ರಿಗಳವರೆಗಿನ ಮಾತುಕತೆಗಳ ಬಳಿಕವೂ ಹೃತಿಕ್ ರೋಷನ್‌ರ ‘ಕಾಬಿಲ್’ ಮತ್ತು ಶಾರುಕ್ ಖಾನ್ ಅವರ ‘ರಈಸ್’ ಚಿತ್ರಗಳು ಒಂದೇ ದಿನ...ಅಂದರೆ ಬುಧವಾರವೇ ಬಿಡುಗಡೆಗೊಂಡಿವೆ. ಎರಡೂ ಚಿತ್ರಗಳ ಹವಾ ಜೋರಾಗಿಯೇ ಇವೆ. ಅಂದ ಹಾಗೆ,ತಾನು ‘ರಈಸ್ ’ ಚಿತ್ರವನ್ನು ನೋಡುವುದಿಲ್ಲ..ಬದಲಿಗೆ ‘ಕಾಬಿಲ್’ ಚಿತ್ರವನ್ನೇ ಮತ್ತೊಂದು ಬಾರಿ ನೊಡುತ್ತೇನೆ ಎಂದು ರಾಕೇಶ್ ರೋಷನ್ ಮಂಗಳವಾರ ಪ್ರಕಟಿಸುವ ಮೂಲಕ ಶಾರುಖ್ ಮತ್ತು ರೋಷನ್‌ಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತೆ ಕಂಡುಬರುತ್ತಿದೆ.

ಆದರೆ ಹದಗೆಡುತ್ತಿರುವ ಸಂಬಂಧವನ್ನು ಸರಿಪಡಿಸಲು ಹೃತಿಕ್ ಮುಂದಾಗಿರು ವಂತಿದೆ. ತನ್ನ ‘ಗುರು’ ಶಾರುಕ್ ಜೊತೆ ಅವರು ಟ್ವಿಟರ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘‘ಪ್ರಿಯ ಶಾರುಕ್,ಗುರುವಾಗಿ ನೀವಿಂದು ‘ರಈಸ್ ’ ಮೂಲಕ ನನಗೆ ಮತ್ತೊಮ್ಮೆ ಸ್ಫೂರ್ತಿಯನ್ನು ನೀಡುತ್ತೀರಿ ಎಂಬ ವಿಶ್ವಾಸವಿದೆ ಮತ್ತು ‘ಕಾಬಿಲ್’ ನೋಡಿ ನೀವು ನನ್ನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತೀರಿ ಎಂದು ಶಿಷ್ಯನಾಗಿ ನಾನು ಆಶಿಸುತ್ತಿದ್ದೇನೆ ’’ಎಂದು ಹೃತಿಕ್ ಟ್ವೀಟಿಸಿದ್ದಾರೆ.

ಶಾರುಕ್ ಮತ್ತು ಹೃತಿಕ್ ಒಳ್ಳೆಯ ಸ್ನೇಹಿತರು ಎಂದು ಬಾಲಿವುಡ್ ಪರಿಗಣಿಸಿದೆ. ಶಾರುಕ್ ಈ ಹಿಂದೆ ಕೊಯ್ಲೆ,ಕರಣ್ ಅರ್ಜುನ್‌ನಂತಹ ಚಿತ್ರಗಳಲ್ಲಿ ಹೃತಿಕ್ ತಂದೆ ರಾಕೇಶ್ ರೋಷನ್ ಜೊತೆ ಕೆಲಸವನ್ನೂ ಮಾಡಿದ್ದಾರೆ.

ಹೃತಿಕ್‌ಗೆ ಟ್ವಿಟರ್ ಮೂಲಕ ಉತ್ತರಿಸಿರುವ ಶಾರುಕ್, ‘‘ಎರಡೂ ಚಿತ್ರಗಳು ಒಂದೇ ಸಮಯದಲ್ಲಿ ಬಿಡುಗಡೆಯಾಗುವುದನ್ನು ತಪ್ಪಿಸಬಹುದಿತ್ತೇನೋ ಎಂದು ಅನ್ನಿಸುತ್ತಿದೆ. ‘ಕಾಬಿಲ್’ ಒಳ್ಳೆಯದೇ ಇರುತ್ತದೆ ’’ಎಂದಿದ್ದಾರೆ.

ಈ ಕಚ್ಚಾಟದ ಕುರಿತು ಈ ಮೊದಲು ಮಾತನಾಡಿದ್ದ ಹೃತಿಕ್,ವ್ಯವಹಾರವೇ ಬೇರೆ...ಸ್ನೇಹವೇ ಬೇರೆ. ರಈಸ್ ಮತ್ತು ಕಾಬಿಲ್ ಕಿತ್ತಾಡಿಕೊಳ್ಳಬಹುದು, ಆದರೆ ಸ್ನೇಹದಲ್ಲಿ ಕಿತ್ತಾಟವಾಗಬಾರದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಮ್ಮ ಚಿತ್ರಗಳ ಯಶಸ್ಸಿಗಾಗಿ ನಾವು ಎಲ್ಲ ಪ್ರಯತ್ನಗಳನ್ನು ಮಾಡಲೇಬೇಕು ಮತ್ತು ಸ್ನೇಹವಂತೂ ಇದ್ದೇ ಇರುತ್ತದೆ ಎದು ಹೇಳಿದ್ದರು.

 ಈ ಹಿಂದೆ ಸಲ್ಮಾನ್ ಖಾನ್ ಅವರ ‘ಸುಲ್ತಾನ್’ ಜೊತೆಗೆ ಪೈಪೋಟಿಯನ್ನು ತಪ್ಪಿಸಲು ‘ರಈಸ್’ ಚಿತ್ರದ ಬಿಡುಗಡೆಯನ್ನು ಶಾರುಕ್ ಮುಂದೂಡಿದ್ದರು. ಆ ಬಳಿಕ ಎಷ್ಟೇ ಪ್ರಯತ್ನಿಸಿದ್ದರೂ ಬಿಡುಗಡೆಗೆ ಇನ್ನೊಂದು ಸೂಕ್ತ ದಿನಾಂಕ ದೊರಕಿರಲಿಲ್ಲ. ಹೀಗಾಗಿ ಜ.26ರ ವಾರಾಂತ್ಯದ ಸುದೀರ್ಘ ರಜೆಯನ್ನೇ ಅವರು ಆಯ್ಕೆ ಮಾಡಿಕೊಂಡಿದ್ದರು. ಆದರೆ ಜ.25ರಂದು ‘ಕಾಬಿಲ್’ ಬಿಡುಗಡೆ ಮಾಡಲು ರೋಷನ್‌ಗಳು ಮೊದಲೇ ನಿರ್ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News