ಪಾಕ್ ಸೈನಿಕರಿಗೆ ಸಿಹಿ ಹಂಚಿದ ಬಿಎಸ್‌ಎಫ್
Update: 2017-01-26 21:01 IST
ಅತ್ತಾರಿ(ಅಮೃತಸರ),ಜ.26: ಗಣರಾಜ್ಯೋತ್ಸವದ ಅಂಗವಾಗಿ ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯ ಯೋಧರು ಇಂದಿಲ್ಲಿಯ ಅತ್ತಾರಿ-ವಾಘಾ ಗಡಿಯ ಜಂಟಿ ಕಾವಲು ನೆಲೆಯಲ್ಲಿ ಪಾಕಿಸ್ಥಾನಿ ರೇಂಜರ್‌ಗಳಿಗೆ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳನ್ನು ಮತ್ತು ಹಣ್ಣುಗಳನ್ನು ವಿತರಿಸಿ ಹರ್ಷವನ್ನು ಹಂಚಿಕೊಂಡರು.
ಪಾಕಿಸ್ತಾನಿ ಕಮಾಂಡರ್‌ಗಳ ಟ್ರೂಪ್ ಕಮಾಂಡರ್ ತನ್ನ ಸಹೋದ್ಯೋಗಿಗಳೊಂದಿಗೆ ಸಿಹಿಯನ್ನು ಸ್ವೀಕರಿಸಿ ಭಾರತೀಯ ಯೋಧರೊಂದಿಗೆ ಹಸ್ತಲಾಘವ ಮಾಡಿದರು ಮತ್ತು ಕಾಣಿಕೆಗಳನ್ನು ವಿನಿಮಯಿಸಿಕೊಂಡರು ಎಂದು ಬಿಎಸ್‌ಎಫ್ ತಿಳಿಸಿದೆ.