×
Ad

ಶೀಘ್ರದಲ್ಲೇ ಹೊಸ ವಿನ್ಯಾಸದಲ್ಲಿ 1,000 ರೂ. ಹೊಸ ನೋಟು

Update: 2017-01-27 10:06 IST

ಹೊಸದಿಲ್ಲಿ, ಜ.27:ಕಳೆದ ನವೆಂಬರ್ ನಲ್ಲಿ ಹಳೆಯ 1,000 ರೂ ಮತ್ತು 500 ರೂ. ಚಲಾವಣೆ ರದ್ದುಗೊಳಿಸಿದ ಬಳಿಕ 2 ಸಾವಿರ ರೂ. ಮತ್ತು 500 ರೂ. ಮುಖ ಬೆಲೆಯ ನೋಟು ಚಲಾವಣೆಗೆ ಬಂತು. ಶೀಘ್ರದಲ್ಲೇ 1,000 ರೂ. ನೋಟನ್ನು ಹೊಸ ವಿನ್ಯಾಸದೊಂದಿಗೆ ಹೊರ ತರಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ರದ್ದಾಗಿರುವ  ಹಳೆಯ 1,000 ರೂ. ಮುಖಬೆಲೆಯ ನೋಟುಗಳಿಗಿಂತ ಹೊಸ 1,000 ರೂ. ನೋಟು ಗಾತ್ರದಲ್ಲಿ ಚಿಕ್ಕ ಮತ್ತು ಚೊಕ್ಕದಾಗಿದ್ದು, ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ಅಂಶಗಳನ್ನು ಒಳಗೊಂಡಿವೆ  ಎಂದು ಮೂಲಗಳು ತಿಳಿಸಿವೆ.
ಒಂದು ಸಾವಿರ ರುಪಾಯಿಯ ಹೊಸನೋಟು ಅಂಧರಿಗೆ ಗುರುತಿಸಲು ಸಾಧ್ಯವಾಗುವಂತೆ ಬ್ರೈಲ್‌ಸ್ನೇಹಿ ಆಗಿರಲಿವೆ. ಇದೀಗ ಚಲಾವಣೆಯಲ್ಲಿರುವ ಹೊಸ 2,000 ಮುಖಬೆಲೆಯ ನೋಟುಗಳಿಂದ ಕಂಡು ಬಂದಿರುವ ಚಿಲ್ಲರೆ ಸಮಸ್ಯೆಯನ್ನು ನಿವಾರಿಸಲು  ಭಾರತೀಯ ರಿಸರ್ವ್ ಬ್ಯಾಂಕ್  1,000 ರೂ ನೋಟುಗಳ ಮುದ್ರಣ ಕಾರ್ಯವನ್ನು ತ್ವರಿತಗೊಳಿಸಿದೆ  ಎಂದು ತಿಳಿದು ಬಂದಿದೆ.
ಇದೇ ವೇಳೆ ಎಟಿಎಂನಿಂದ ದಿನಕ್ಕೆ ಪಡೆಯಬಹುದಾದ ಗರಿಷ್ಠ ಮೊತ್ತವನ್ನು ರಿಸರ್ವ್ ಬ್ಯಾಂಕ್ 4,500ರಿಂದ 10 ಸಾವಿರ ರೂ.ಗಳಿಗೆ ಏರಿಸಿತ್ತು.   ವಿತ್ ಡ್ರಾ ಮಿತಿಯನ್ನು ಮುಂದೆ ರದ್ದುಗೊಳಿಸಲಿದೆ. ಆದರೆ ಇದು ಮಾರ್ಚ್  ಅಂತ್ಯದೊಳಗಾಗಿ ಜಾರಿಗೆ ಬರುವ ಸಾಧ್ಯತೆ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News