×
Ad

ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವ. ಈಗ ಬಾಡಿಗೆ ಮನೆ ನಿವಾಸಿ !

Update: 2017-01-27 16:30 IST

ಕಾನ್ಪುರ, ಜ.27 :ಇಲ್ಲಿಂದ ಸುಮಾರು 125 ಕಿಮೀ ದೂರದ ಬಂಡ ಎಂಬ ಗ್ರಾಮದಲ್ಲಿ ತೀರಾ ದುಃಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ92 ವರ್ಷದ ಜಮುನಾ ಪ್ರಸಾದ್. ಅವರನ್ನು ನೋಡಿದರೆ ಯಾರು ಕೂಡ ನಾಲ್ಕು ಬಾರಿ ಶಾಸಕರಾಗಿದ್ದ ಹಾಗೂ ಎರಡು ಬಾರಿ ಸಚಿವರಾಗಿದ್ದವರೆಂದು ನಂಬಲು ಸಾಧ್ಯವಿಲ್ಲ. ತಮ್ಮ ಪಿಂಚಣಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ ಅವರು. ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಬಡವರಿಗಾಗಿ ದುಡಿದ ಅವರನ್ನು ಜನರು ಪ್ರೀತಿಯಿಂದ ಬೋಸ್ ಎಂದು ಕರೆಯುತ್ತಾರೆ.

ತಮ್ಮ ಮನೆಯ ಬಾಡಿಗೆಯನ್ನೂ ತಮ್ಮ ಪಿಂಚಣಿಯಿಂದಲೇ ಜಮುನಾ ಪ್ರಸಾದ್ ನೀಡುತ್ತಾರೆ. ಅವರ ಪತ್ನಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರೆ ಮೂವರು ಪುತ್ರರು ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಈಗ ಜಮುನಾ ಪ್ರಸಾದ್ ಅವರಿಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ. ಆದರೆ ತಾನಿನ್ನೂ ರಾಜಕೀಯದಿಂದ ನಿವೃತ್ತಿ ಪಡೆದಿಲ್ಲ ಎಂದು ಅವರು ಹೇಳುತ್ತಾರೆ.

ಖಿನ್ನಿ ನಾಕ ಎಂಬಲ್ಲಿ ಜನಿಸಿದ ಅವರು ಯುವಕರಾಗಿದ್ದಾಗಲೇ ಸೋಶಿಯಲಿಸ್ಟ್ ಆಂದೋಲನದಲ್ಲಿ ಭಾಗಿಯಾಗಿದ್ದರು. ಗೆಳೆಯರ ಸಹಾಯದಿಂದ 1962 ಹಾಗೂ 1967 ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದರು.1974ರಲ್ಲಿ ಬಂಡ ಸದರ್ ಕ್ಷೇತ್ರದಿಂದ ಶಾಸಕರಾದ ಅವರು ಸಚಿವರೂ ಆದರು. 1997ರ ಚುನಾವಣೆಯಲ್ಲೂ ಗೆದ್ದ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನಾಗಿ ಮಾಡಲಾಗಿತ್ತು. 1989ರಲ್ಲಿ ಅವರು ಮುಲಾಯಂ ಸಿಂಗ್ ಯಾದವ್ ಅವರ ಸಚಿವ ಸಂಪುಟದಲ್ಲಿ ಪಶುಸಂಗೋಪನಾ ಮತ್ತು ಮೀನುಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1955ರಲ್ಲಿ ತಮ್ಮ ಸಹೋದರಿಯ ವಿವಾಹಕ್ಕಾಗಿ ಹಣದ ಅಗತ್ಯವಿರುವಾಗ ತಮ್ಮ ಪೂರ್ವಿಕರ ಮನೆಯನ್ನು ಮಾರಿದ್ದ ಅವರು ಅಂದಿನಿಂದ ಈ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News