×
Ad

ಹಿರಿಯ ಗಾಂಧಿವಾದಿಗೆ ಖಾದಿಬೋರ್ಡ್‌ನಿಂದ ಜಪ್ತಿ ನೋಟಿಸ್ !

Update: 2017-01-27 18:21 IST

ಪ್ಪಳ, ಜ. 27: ಗಣರಾಜ್ಯೋತ್ಸ ಸಂಭ್ರಮದಲ್ಲಿರುವಾಗಲೇ ಹತ್ತು ವರ್ಷ ಹಿಂದೆ ಖಾದಿ ಬೋರ್ಡ್‌ನಿಂದ 10,000 ರೂಪಾಯಿ ಸಾಲ ಪಡೆದಿದ್ದ ಗಾಂಧಿವಾದಿಯ ಮನೆಗೆ ಖಾದಿಬೋರ್ಡ್ ಜಫ್ತಿ ನೋಟಿಸ್ ಅಂಟಿಸಿದ ಘಟನೆ ನಡೆದಿದೆ. ಗಾಂಧಿವಾದಿಯಾಗಿ ಬದುಕುತ್ತಿರುವ ಬಂದಿಯೋಡ್ ಭಗವತಿ ನಗರದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತ ಮಾಧವ ಆಚಾರಿ(78) ಕುಟುಂಬವೀಗ ಖಾದಿಬೋರ್ಡ್‌ನಿಂದ ಜಪ್ತಿ ಬೆದರಿಕೆ ಎದುರಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಖಾದಿ ಬೋರ್ಡ್‌ಗೆ ಈಗಾಗಲೇ ಮಾಧವ ಆಚಾರಿ ಸಾಲದ ಬಾಕಿ ಮೊತ್ತ 65,000ರೂಪಾಯಿಯನ್ನು ಪಾವತಿಸಿದ್ದಾರೆ. ಈ ನಡುವೆ ಉಪ್ಪಳ ವಿಲೇಜ್ ಆಫೀಸರ್ ಸ್ಥಳ ಅಳತೆ ಮಾಡಿ ಜಫ್ತಿ ನೋಟಿಸ್ ಅಂಟಿಸಿದ್ದಾರೆ. ಮಾಧವ ಬಂಡಾರಿಗೆ ಮೂರು ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು, ಬಳಿಕ ಮಲಗಿದಲ್ಲಿಯೇ ಆಗಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆ.

ಪತ್ನಿ ಮೂರು ವರ್ಷ ಹಿಂದೆ ನಿಧನರಾಗಿದಾರೆ. ಆಗಲೋ ಈಗಲೋ ಕುಸಿಯಬಹುದಾದ ಒಂದು ಹಂಚಿನ ಮನೆಯಲ್ಲಿ ಇವರು ವಾಸಿಸುತ್ತಿದ್ದಾರೆ. ಇವರ ಚಿಕಿತ್ಸೆಗೆ ಪ್ರತಿತಿಂಗಳೂ 4,000ರೂಪಾಯಿ ಖರ್ಚಾಗುತ್ತಿದೆ.ಇಬ್ಬರು ಹೆಣ್ಣುಮಕ್ಕಳು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದಾರೆ. ಆದರೆ ಪುತ್ರ ತಂದೆಯತ್ತ ತಿರುಗಿನೋಡುವುದಿಲ್ಲ ಎಂದು ಮಾಧವ ಆಚಾರಿ ಹೇಳುತ್ತಾರೆ. ಅವರಿಗೆ ಪಡಿತರ ಚೀಟಿ ಇಲ್ಲ. ವಯೋವೃದ್ಧರ ಪೆನ್ಶನ್ ಸಿಗುತ್ತಿಲ್ಲ. ಸರಕಾರ ಈವರೆಗೂ ಯಾವುದೇ ಸಹಾಯ ಹಸ್ತ ಚಾಚಿಲ್ಲ. ಈ ವಿಷಯದಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಬೇಕು. ಕುಟುಂಬಕ್ಕೆ ಅಗತ್ಯ ಸಂರಕ್ಷಣೆ ಒದಗಿಸಬೇಕು ಎಂದು ಉಪ್ಪಳ ಪೌರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಫ್. ಇಕ್ಬಾಲ್ ಆಗ್ರಹಿಸಿದ್ದಾರೆಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News