×
Ad

ಇವರು 'ಅಂಗ್ರೇಝೋನ್ಕೆ ಝಮಾನೆಕೆ ಪೊಲೀಸ್' !

Update: 2017-01-28 13:08 IST

ಹೊಸದಿಲ್ಲಿ, ಜ.28: ಈ ವೃದ್ಧನ ಹೆಸರು ಜುರ್ರತ್ ಹುಸೈನ್ ಕಾಝ್ಮಿ. ಅವರೇ ಹೇಳುವಂತೆ ಅವರ ವಯಸ್ಸು ಸುಮಾರು 115. ನಿಮಗೆ ಕೇಳಿದರೆ ಆಶ್ಚರ್ಯವಾಗಬಹುದು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಪೈಕಿ ಇಷ್ಟು ವಯಸ್ಸಿನವರು ಭಾರತದಲ್ಲಿ ಯಾರೂ ಇಲ್ಲ. ಇವರು ಬ್ರಿಟಿಷರು, ನವಾಬರು ಹಾಗೂ ಭಾರತ ಸರಕಾರದಡಿಯಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದವರು.

ಉತ್ತರ ಪ್ರದೇಶದ ಬರೇಲಿಯವರಾದ ಇವರು ಪ್ರತಿ ಗಣರಾಜ್ಯೋತ್ಸವ ದಿನದಂದು ಬೆಳಗ್ಗೆ 4 ಗಂಟೆಗೆ ಎದ್ದು ತನಗೆ  ಆತ್ಮೀಯ ಗೆಳೆಯನೊಬ್ಬ ನೀಡಿರುವ ತೇಗದ ಮರದ ಪೆಟ್ಟಿಗೆಯೊಳಗಿನಿಂದ ತನಗೆ ದೊರಕಿರುವ ಪದಕಗಳು, ತನ್ನ ಸಿಲ್ಕ್ ಕುರ್ತಾ ಪೈಜಾಮ, ರಾಂಪುರಿ ಟೊಪ್ಪಿ, ಓವರ್ ಕೋಟ್, ಲೆದರ್ ಶೂ ಹೊರತೆಗೆದು ಎಲ್ಲವನ್ನೂ ಶುಚಿಗೊಳಿಸುತ್ತಾರೆ. ಬಟ್ಟೆಗಳಿಗೆ ಇಸ್ತ್ರಿ ಮಾಡಿ, ಶೂ ಪಾಲಿಶ್ ಮಾಡಿ ಅವುಗಳನ್ನು ಧರಿಸಿ ಬರೇಲಿಯಲ್ಲಿ ಅವರಿಗಾಗಿ ಪ್ರತಿ ವರ್ಷ ಆಯೋಜಿಸಲಾಗುವ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಆದರೆ ಈ ಬಾರಿ ಅವರಿಗೆ ಉಸಿರಾಟದ ಸಮಸ್ಯೆ ಒಮ್ಮೆಗೇ ಕಾಣಿಸಿಕೊಂಡಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

1922ರಲ್ಲಿ ಬ್ರಿಟಿಷರ ಆಡಳಿತ ಸಮಯದಲ್ಲಿ ಅವರು ಇಂಪೀರಿಯಲ್ ಪೊಲೀಸ್ ಸೇವೆಗೆ ಸೇರಿದ್ದರು. ಅವರ ಕುಟುಂಬಕ್ಕೆ ಮೊರಾದಾಬಾದ್ ನ ಕುಲ್ಬಾರ ಗ್ರಾಮದಲ್ಲಿ ಸುಮಾರು 2,000 ಹೆಕ್ಟೇರ್ ಭೂಮಿಯಿತ್ತು. ಅವರಿಗೆ ಉದ್ಯೋಗ ಮಾಡಬೇಕೆಂದೇನೂ ಇರಲಿಲ್ಲ. ಸುಮ್ಮನೆ ಹಾಗೆಯೇ ಪೊಲೀಸ್ ನೇಮಕಾತಿ ಶಿಬಿರಕ್ಕೆ ಹೋಗಿ ಭಾಗವಹಿಸಿದ್ದ ಅವರು ಅತ್ಯುತ್ತಮ ಅಭ್ಯರ್ಥಿಯಾಗಿ ನೇಮಕಾತಿ ಪಡೆದಿದ್ದರು. 1947ರಲ್ಲಿ ನವಾಬ್ ರಝಾ ಅಲಿ ಖಾನ್ ಇಂಪೀರಿಯಲ್ ಪೊಲೀಸ್ ತಮ್ಮ ವಶಕ್ಕೆ ತೆಗೆದುಕೊಂಡಿದ್ದರೆಂದು ಕಾಝ್ಮಿ ನೆನಪಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಾನಂತರ ಅವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನಸ್ಟೇಬಲ್ ಆಗಿ ಸೇರಿದ್ದರು. ಕಾಝ್ಮಿಗೆ ಒಟ್ಟು ಹತ್ತು ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News