ಪೊಲೀಸರಿಗೆ ಹೆದರಿ ಓಟಕ್ಕಿತ್ತ ಜೂಜುಕೋರ ಗುಂಡಿಗೆ ಬಿದ್ದು ಮೃತ್ಯು
ವಿಲ್ಲುಪ್ಪಳ್ಳಿ, ಜ.28: ದೇವಳ ಜಾತ್ರೆಯಲ್ಲಿ ಜುಗಾರಿ ನಿರತರಾಗಿದ್ದವರನ್ನು ಪೊಲೀಸರು ಬೆದರಿಸಿದ ಹಿನ್ನಲೆಯಲ್ಲಿ ಓಡಿಹೋದ ಯುವಕನೊಬ್ಬ ಗುಂಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಾಂಙಟ್ ರೂಪೇಶ್(36) ಮೃತಪಟ್ಟ ವ್ಯಕ್ತಿಯಾಗಿದ್ದು, ಮಯ್ಯನ್ನೂರ್ ತಟ್ಟಾರತ್ ದೇವಳ ಪರಿಸರದಲ್ಲಿ ಜುಗಾರಿ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಪೊಲೀಸರನ್ನು ನೋಡಿ ಈತ ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈವೇಳೆ ಹತ್ತಿರದಲ್ಲಿದ್ದ ದೊಡ್ಡ ಗುಂಡಿಯೊಳಕ್ಕೆ ಬಿದ್ದಿದ್ದ. ಈತ ನಾಪತ್ತೆಯಾಗಿರುವುದನ್ನು ಗಮನಿಸಿ ಊರವರು ಹುಡುಕಿದಾಗ ಗುಂಡಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಆದರೆ ಮೃತದೇಹದ ಮೇಲೆ ಹಲ್ಲೆ ನಡೆಸಿರುವ ಗುರುತುಗಳಿವೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಪೊಲೀಸ್ ದೇವಳ ಪರಿಸರದಲ್ಲಿ ಈತನ್ನು ಹೊಡೆದು ಬೆನ್ನಟ್ಟಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಹೀಗೆ ಹೊಡೆದುದುರ ಗುರುತುಗಳು ದೇಹದಲ್ಲಿವೆ ಎಂದು ಹೇಳಲಾಗಿದೆ. ವಡಗರ ಸರಕಾರಿ ಆಸ್ಪತ್ರೆಯಲ್ಲಿ ಈತನ ಶವ ಮಹಜರು ನಡೆಸಲು ಸಂಬಂಧಿಕರು ಅಡ್ಡಿಪಡಿಸಿದ್ದರಿಂದ ಸ್ಥಳಕ್ಕೆ ಡಿವೈಎಸ್ಪಿ ಆಗಮಿಸಿದ ನಂತರ ಪೋಸ್ಟ್‌ಮಾರ್ಟಂ ನಡೆಸಲಾಯಿತು ಎಂದು ವರದಿ ತಿಳಿಸಿದೆ.