×
Ad

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಹಿಮಪಾತ:ಐವರು ಯೋಧರು ಸಿಲುಕಿರುವ ಶಂಕೆ

Update: 2017-01-28 13:32 IST

ಶ್ರೀನಗರ, ಜ.28: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಸೇನಾ ಶಿಬಿರದಲ್ಲಿ ಶನಿವಾರ ಸಂಭವಿಸಿದ ಭಾರೀ ಹಿಮಪರ್ವತ ಕುಸಿತದಲ್ಲಿ ಐವರು ಸೈನಿಕರು ಸಿಲುಕಿಹಾಕಿಕೊಂಡಿರುವ ಶಂಕೆಯಿದೆ.

ಯೋಧರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಕಳೆದ 4 ದಿನಗಳ ಅಂತರದಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರನೆ ಬಾರಿ ಹಿಮಪಾತ ಸಂಭವಿಸಿದೆ.

 ಜಮ್ಮು-ಕಾಶ್ಮೀರದ ಹಲವೆಡೆ ಭೂಕುಸಿತ ಹಾಗೂ ಹಿಮಪಾತದಿಂದಾಗಿ ಸತ್ತವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಹಿಮಪಾತದಲ್ಲಿ ಸುಮಾರು 14 ಸೈನಿಕರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News