ಫೆ.7ಕ್ಕೆ ಕೇರಳದಲ್ಲಿ ಲಾರಿ ಮುಷ್ಕರ

Update: 2017-01-30 06:55 GMT

ಪಾಲಕ್ಕಾಡ್,ಜ.30: ಫೆಬ್ರವರಿ ಏಳಕ್ಕೆ ರಾಜ್ಯದಲ್ಲಿ ಸರಕು ಸಾಗಾಟದ ವಾಹನಗಳು ಮುಷ್ಕರ ನಡೆಸಲಿವೆ ಎಂದು ಸ್ಟೇಟ್ ಲಾರಿ ಓನರ್ಸ್ ಫೆಡರೇಶನ್ ತಿಳಿಸಿದೆ.

ದೇಶದಲ್ಲಿ ಮೋಟಾರು ವಾಹನ ಕ್ಷೇತ್ರದಲ್ಲಿ ಕೇಂದ್ರ ಸರಕಾರ, ಹಸಿರು ನ್ಯಾಯಮಂಡಲಿ,ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಅಪ್ರಯೋಗಿಕ ಕಾನೂನುಗಳನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಫೆಡರೇಶನ್ ಪದಾಧಿಕಾರಿಗಳು ಹೇಳಿದ್ದಾರೆ. 15ವರ್ಷ ಹಳೆಯ ಡೀಸೆಲ್ ವಾಹನಗಳನ್ನು ನಿಷೇಧಿಸುವ ಕ್ರಮವನ್ನು ಕೇಂದ್ರಸರಕಾರ ಕೈಬಿಡಬೇಕು. ವಾಹ ನೋಂದಾವಣೆ ಸಹಿತ ಶುಲ್ಕವನ್ನು ಹೆಚ್ಚಿಸುವ ಕೇಂದ್ರದ ನಿರ್ಧಾರ ರದ್ದುಗೊಳಿಸಬೇಕು. ತೈಲಬೆಲ ನಿರ್ಧರಿಸುವ ಅಧಿಕಾರವನ್ನು ತೈಲಕಂಪೆನಿಗಳಿಂದ ಹಿಂಪಡೆಯಬೇಕು. ಮೋಟಾರು ವಾಹನ ಇಲಾಖೆಯಲ್ಲಿ ಕೇರಳ ಸರಕಾರ ಜಾರಿಗೆ ತಂದ ಸೇವಾಕರ ರದ್ದುಪಡಿಸಬೇಕು ಮುಂತಾದ ಬೇಡಿಕೆಗಳನ್ನು ಫೆಡರೇಶನ್ ಮುಂದಿಟ್ಟು ಫೆ.7.ರಂದು ಸರಕುಸಾಗಾಟ ವಾಹನ ಮುಷ್ಕರಕ್ಕೆ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News