ಬಿಎಎಸ್‌ಎಲ್‌ಪಿ ಕೋರ್ಸ್‌ಗೆ ನೀಟ್ ಅಂಕ ಮಾನದಂಡ
Update: 2017-01-30 22:24 IST
ತಿರುವನಂತಪುರ,ಜ.30: ರಾಷ್ಟ್ರೀಯ ವಾಕ್ ಮತ್ತು ಶ್ರವಣ ಸಂಸ್ಥೆ (ನಿಷ್)ಯು 2017-18ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಳ್ಳಲಿರುವ ಬ್ಯಾಚಲರ್ ಆಫ್ ಆಡಿಯೊಲಜಿ ಆ್ಯಂಡ್ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ (ಬಿಎಎಸ್‌ಎಲ್‌ಪಿ) ಕೋರ್ಸ್‌ನ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅಂಕಗಳನ್ನು ಪರಿಗಣಿಸಲಿದೆ.
ಕೋರ್ಸ್‌ಗೆ ಅರ್ಜಿಯ ಜೊತೆಗೆ ಅಭ್ಯರ್ಥಿಯು ತನ್ನ ನೀಟ್ ಅಂಕಗಳನ್ನು ಸಲ್ಲಿಸಬೇಕು ಮತ್ತು ಈ ಅಂಕಗಳ ಆಧಾರದಲ್ಲಿ ರ್ಯಾಂಕ್ ಪಟ್ಟಿಯನ್ನು ಸಿದ್ಧಗೊಳಿಸಲಾಗುವುದು ಎಂದು ನಿಷ್ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಪುನರ್ವಸತಿ ಮಂಡಳಿ(ಆರ್‌ಸಿಐ ) ಯಿಂದ ಅತ್ಯುತ್ತಮ ಸಂಸ್ಥೆಯೆಂದು ಮಾನ್ಯತೆ ಪಡೆದಿರುವ ನಿಷ್ 2002ರಿಂದ ಬಿಎಎಸ್‌ಎಲ್‌ಪಿ ಕೋರ್ಸ್‌ಗಳನ್ನು ನಡೆಸುತ್ತಿದೆ. ಈ ಕೋರ್ಸ್ ವೃತ್ತಿಪರರನ್ನು ಆಡಿಯೊಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್‌ಗಳಾಗಿ ತರಬೇತುಗೊಳಿಸುತ್ತದೆ.