×
Ad

ಬಿಳಿ ವೈರ್ ರೂಪದಲ್ಲಿ ಅಕ್ರಮ ಚಿನ್ನ ಸಾಗಾಟ

Update: 2017-01-30 23:51 IST

ದಿಲ್ಲಿ,ಜ.30: 27 ಲ.ರೂ.ವೌಲ್ಯದ ಸುಮಾರು ಒಂದು ಕೆ.ಜಿ.ಚಿನ್ನವನ್ನು ಅಕ್ರಮವಾಗಿ ದೇಶದೊಳಗೆ ತರಲು ಪ್ರಯತ್ನಿಸಿದ್ದ ಇಬ್ಬರು ಮಹಿಳೆಯರನ್ನು ಇಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಚಿನ್ನ ಬಿಳಿಯ ಲೇಪನ ಮಾಡಿದ್ದ ವೈರ್ ತುಂಡುಗಳ ರೂಪದಲ್ಲಿತ್ತು. ಬಂಧಿತ ಮಹಿಳೆಯರು ಪಾಣಿಪತ್ ನಿವಾಸಿಗಳಾಗಿದ್ದು ರವಿವಾರ ಬ್ಯಾಂಕಾಂಕ್‌ನಿಂದ ಬಂದಿಳಿದಿದ್ದರು. ಗ್ರೀನ್ ಚಾನೆಲ್ ದಾಟಿದ ನಂತರ ಅವರನ್ನು ತಪಾಸಣೆ ಗೊಳಪಡಿಸಿದಾಗ ಬ್ಯಾಗ್‌ಗಳಲ್ಲಿ ಬಚ್ಚಿಟಿದ್ದ ಚಿನ್ನದ ವೈರ್‌ಗಳು ಪತ್ತೆಯಾಗಿದ್ದವು. 1,008 ಗ್ರಾಂ ತೂಕದ ಇವುಗಳ ವೌಲ್ಯ 27.30 ಲ.ರೂ.ಆಗಿದೆ ಎಂದು ಕಸ್ಟಮ್ಸ್ ಅಧಿಕಾರಿ ಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News