ಕುಸಿದು ಬಿದ್ದ ಮಾಜಿ ಕೇಂದ್ರ ಸಚಿವ ಇ. ಅಹ್ಮದ್
Update: 2017-01-31 12:55 IST
ಹೊಸದಿಲ್ಲಿ, ಜ.31: ಮಾಜಿ ಕೇಂದ್ರ ಸಚಿವ ಇ.ಅಹ್ಮದ್ ಅವರು ಅನಾರೋಗ್ಯದಿಂದಾಗಿ ಸಂಸತ್ತಿನಲ್ಲಿ ಕುಸಿದು ಬಿದ್ದರು. ಬಜೆಟ್ ಅಧಿವೇಶನ ಆರಂಭಗೊಳ್ಳುವ ಸ್ವಲ್ಪ ಹೊತ್ತಿನ ಮೊದಲು ಅವರು ಕುಳಿತಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರಾಮ್ ಮೋಹನ್ ಲೋಹಿಯಾ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಐಯುಎಂಎಲ್ ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕೇರಳದ ಸಂಸದ ಇ.ಅಹ್ಮದ್ ಅವರು ಡಾ. ಮನಮೋಹನ್ ಸಿಂಗ್ ಸರಕಾರದಲ್ಲಿ ವಿದೇಶಾಂಗ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.