×
Ad

ಭಾರತದಲ್ಲಿರುವ ಹೊರಗಿನ ಮುಸ್ಲಿಮರನ್ನು ನಿಷೇಧಿಸಬೇಕು: ಯೋಗಿ ಆದಿತ್ಯನಾಥ್

Update: 2017-01-31 12:56 IST

ಬುಲಂದ್‌ಶಹರ್,ಜ.31: ಬಿಜೆಪಿಯ ವಿವಾದಿತ ನಾಯಕ ಯೋಗಿ ಆದಿತ್ಯನಾಥ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಏಳು ಮುಸ್ಲಿಮ್ ರಾಷ್ಟ್ರಗಳಿಗೆ ನಿಷೇಧ ಆದೇಶವನ್ನುಪ್ರಶಂಸಿದ್ದು, ಭಯೋತ್ಪಾದನೆ ನಿಯಂತ್ರಿಸಲಿಕ್ಕಾಗಿ ಭಾರತವೂ ಈ ರೀತಿಯ ಕ್ರಮಕ್ಕೆ ಮುಂದಾಗುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತಾಡಿದ ಅವರು," ಈ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯಲಿಕ್ಕಾಗಿ ಟ್ರಂಪ್ ರೀತಿಯ ಕ್ರಮ ಅಗತ್ಯವಿದೆ" ಎಂದು ಗುಡುಗಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮೂಲಭೂತವಾದಿ ಇಸ್ಲಾಮೀ ಭಯೋತ್ಪಾದಕರನ್ನು ಅಮೆರಿಕದಿಂದ ಹೊರಗಿಡಲು ಹೊಸ ಕ್ರಮ ಆರಂಭಿಸಿದ್ದು, ಮುಸ್ಲಿಂ ಬಹುಸಂಖ್ಯಾತ ದೇಶದ ಜನರಿಗೆವೀಸಾ ನಿಷೇಧಿಸಿ ವಿವಾದ ಸೃಷ್ಟಿಸಿದ್ದಾರೆ. ಅಧ್ಯಕ್ಷರ ಮುಂದಿನ ಆದೇಶದ ತನಕ ಸಿರಿಯದ ನಿರಾಶ್ರಿತರಿಗೆ ಪ್ರವೇಶವನ್ನು ಅಲ್ಲಿ ನಿಷೇಧಿಸಲಾಗಿದೆ. ಸಮಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್ ಸಮಾಜವಾದಿ ಪಾರ್ಟಿಮತ್ತು ಕಾಂಗ್ರೆಸ್ ಮೈತ್ರಿಯನ್ನು ವಿರೋಧಿಸುತ್ತಿರುವುದನ್ನು ಉದ್ಧರಿಸಿದ ಆದಿತ್ಯನಾಥ್, ಮುಲಾಯಂರಿಗೆ ಹಿಂದುಳಿದ ಜನವಿಭಾಗ ತಮ್ಮಪಕ್ಷದಿಂದ ದೂರವಾಗುವ ಹೆದರಿಕೆಯಿದೆ ಎಂದಿದ್ದಾರೆಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News