×
Ad

ಉದ್ಯೋಗ ಸೃಷ್ಟಿಯಲ್ಲಿ ಸರಕಾರ ಸಂಪೂರ್ಣ ವಿಫಲ:ರಾಹುಲ್

Update: 2017-01-31 15:13 IST

ಹೊಸದಿಲ್ಲಿ,ಜ.31: ಮೋದಿ ಸರಕಾರವು ಮಂಗಳವಾರ ಸಂಸತ್ತಿನ ಜಂಟಿ ಅಧಿವೇಶನ ವನ್ನುದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದಲ್ಲಿ ತನ್ನ ಸಾಧನೆಗಳ ಪಟ್ಟಿಯನ್ನು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರವನ್ನು ತರಾಟೆಗೆತ್ತಿಕೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ಉದ್ಯೋಗ ಸೃಷ್ಟಿಯಲ್ಲಿ ಅದು ಸಂಪೂರ್ಣವಾಗಿ ವಿಫಲ ಗೊಂಡಿದೆ ಎಂದು ಆರೋಪಿಸಿದರು.

ರಾಷ್ಟಪತಿ ಪ್ರಣವ್ ಮುಖರ್ಜಿಯವರ ಭಾಷಣದ ಬಳಿಕ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಡಿದ ಅವರು, ಯುವಜನರಿಗೆ ಉದ್ಯೋಗ ಸೃಷ್ಟಿ ಭಾರತದ ಇಂದಿನ ಮುಖ್ಯಪ್ರಶ್ನೆಯಾಗಿದೆ. ಈ ವಿಷಯದಲ್ಲಿ ಸರಕಾರವು ವಿಫಲಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News