ಲೋಕಸಭಾ ಕಲಾಪ ಮುಂದೂಡಿಕೆ
Update: 2017-02-01 13:16 IST
ಹೊಸದಿಲ್ಲಿ, ಫೆ.1: ಲೋಕಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ 2016-17ನೆ ಸಾಲಿನ ಬಜೆಟ್ ಮಂಡಿಸಿದ ಬೆನ್ನಿಗೇ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು. ಅರುಣ್ ಜೇಟ್ಲಿ ನಾಲ್ಕನೆ ಬಾರಿ ಬಜೆಟ್ ಮಂಡಿಸಿದ್ದು, 1 ಗಂಟೆ, 50 ನಿಮಿಷಗಳ ಕಾಲ ಬಜೆಟ್ ಮುಖ್ಯಾಂಂಶಗಳನ್ನು ಓದಿ ಹೇಳಿದರು.
ಬಜೆಟ್ ಆರಂಭಕ್ಕೆ ಮೊದಲು ಇಂದು ಬೆಳಗ್ಗಿನ ಜಾವ ಹೊಸದಿಲ್ಲಿಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಹಿರಿಯ ಸಂಸದ ಇ. ಅಹ್ಮದ್‌ಗೆ ಒಂದು ನಿಮಿಷ ವೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
"ಬಜೆಟ್‌ನಲ್ಲಿ ರೈತರು ಹಾಗೂ ಯುವಕರಿಗೆ ವಿಶೇಷ ಆದ್ಯತೆ ನೀಡಲಾಗಿಲ್ಲ. ರಾಜಕೀಯ ನಿಧಿಗಳ ಸ್ವಚ್ಛತೆಗೆ ಸಂಬಂಧಿಸಿದ ಯಾವುದೇ ಹೆಜ್ಜೆಗೆ ನಮ್ಮ ಬೆಂಬಲವಿದೆ'' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.