ಫೈಝಲ್ ಕೊಲೆ ಪ್ರಕರಣ: ವಿಎಚ್‌ಪಿ ನಾಯಕನ ಬಂಧನ
ಮಲಪ್ಪುರಂ,ಫೆ.1: ಇಸ್ಲಾಮ್ ಸ್ವೀಕರಿಸಿದ್ದಕ್ಕಾಗಿ ಕೊಡಿಂಞಿಯ ಪುಲ್ಲಾನಿ ಫೈಝಲ್‌ರನ್ನು ಕಡಿದು ಕೊಲೆಗೈದ ಪ್ರಕರಣದಲ್ಲಿ ವಿಶ್ವಹಿಂದೂಪರಿಷತ್ ನಾಯಕನನ್ನು ಬಂಧಿಸಲಾಗಿದೆ. ಕೊಲೆಗೈಯ್ಯಲು ಸಂಚು ಹೆಣೆದಿದ್ದ ಪಳ್ಳಿಕುನ್ನ್ ಅತ್ತಾಣಿಕಲ್ ಕೋಟ್ಟಾಶ್ಶರಿ ಜಯಕುಮಾರ್(48) ಎಂಬಾತನನ್ನು ಪೊಲೀಸ್ ಕ್ರೈಂಬ್ರಾಂಚ್ ಡಿವೈಎಸ್ಪಿ ಸಿ.ಕೆ. ಬಾಬು ನೇತೃತ್ವದ ತನಿಖಾ ತಂಡ ಬಂಧಿಸಿದೆ.
ಪ್ರಕರಣದ ಎಂಟನೆ ಆರೋಪಿಯಾಗಿರುವ ಈತ ಪಾಲಕ್ಕಾಟ್, ನರಿಕ್ಕುನಿ, ಪರಳಿ ಎಂಬೆಡೆಗಳಲ್ಲಿರುವ ಆರೆಸ್ಸೆಸ್ ಕೇಂದ್ರಗಳಲ್ಲಿ ಅಡಗಿ ಕೂತಿದ್ದ . ವಿಶ್ವಹಿಂದೂಪರಿಷತ್ ತಿರೂರಂಙಾಡಿ ತಾಲೂಕು ಕಾರ್ಯದರ್ಶಿಯಾಗಿರುವ ಈತನನ್ನು ಸೋಮವಾರ ಸಂಜೆ ಆರುಗಂಟೆಗೆ ಬಂಧಿಸಲಾಗಿದೆ.
ತಿರೂರಂಙಾಡಿ ವಿದ್ಯಾನಿಕೇತನ್ ಸ್ಕೂಲ್‌ನಲ್ಲಿ ಫೈಝಲ್ ಕೊಲೆಗೆ ಸಂಚು ಹೆಣೆಯಲಾಗಿತ್ತು. ಅಲ್ಲಿದ್ದವರಲ್ಲಿ ಇವನೂ ಸೇರಿದ್ದ. ಆರೋಪಿಯನ್ನು ಪರಪ್ಪನಂಞಾಡಿ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ. ಈತನೂ ಸೇರಿ ಪೈಝಲ್ ಕೊಲೆ ಪ್ರಕರಣದಲ್ಲಿ ಈವರೆಗೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿ ತಿಳಿಸಿದೆ.