×
Ad

​"ನಿಮಗೆ ಹಸಿವಾಗಿದ್ದರೆ ನಾವು ಆಹಾರ ಕೊಡುತ್ತೇವೆ, ಇಲ್ಲಿಗೆ ಬನ್ನಿ"

Update: 2017-02-04 09:18 IST

ಅಹ್ಮದಾಬಾದ್, ಫೆ.4: ಗಡಿಭದ್ರತಾ ಪಡೆಯ ಯೋಧರಿಗೆ ನೀಡಬೇಕಾದ ಅಗತ್ಯ ಸಾಮಗ್ರಿಗಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಬಿಎಸ್‌ಎಫ್‌ನ 29ನೆ ಪಡೆಯ ಯೋಧ ತೇಜ್‌ ಬಹದ್ದೂರ್ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿರುವುದು ಪಾಕಿಸ್ತಾನದ ಗೂಢಚರ್ಯ ಏಜೆನ್ಸಿಗೆ ಖುಷಿ ಕೊಟ್ಟಿದೆ.

"ನಿಮಗೆ ಹಸಿವಾಗಿದ್ದರೆ ನಾವು ಆಹಾರ ಕೊಡುತ್ತೇವೆ, ಇಲ್ಲಿಗೆ ಬನ್ನಿ" ಎಂದು ಪಾಕ್ ಸೈನಿಕರು ಲೇವಡಿ ಮಾಡುತ್ತಿದ್ದಾರೆ. ಪಾಕಿಸ್ತಾನ ಹಾಗೂ ಭಾರತದ ಗಡಿಪ್ರದೇಶದಲ್ಲಿ ಅಕ್ಕಪಕ್ಕದಲ್ಲಿ ನಿಂತಿರುವ ಯೋಧರು ಈ ರೀತಿಯ ಅಣಕ ಎದುರಿಸುತ್ತಿದ್ದಾರೆ. ಸೇನೆಯ ಅವ್ಯವಹಾರಗಳನ್ನು ಬಿಂಬಿಸುವ ಪೋಸ್ಟ್ ಮಾಡಿರುವ ಮತ್ತೊಬ್ಬ ಜವಾನ್ ನವರತ್ನ ಚೌಧರಿಯವರನ್ನೂ ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತೇಜ್ ಬಹದ್ದೂರ್ ಪೋಸ್ಟ್‌ನಿಂದ ಐಎಸ್‌ಐಗೆ ಖುಷಿಯಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ವಿವರಿಸಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News