ಪಂಜಾಬ್-ಗೋವಾದಲ್ಲಿ ವಿಧಾನಸಭಾ ಚುನಾವಣೆ ಆರಂಭ
ಚಂಡಿಗಡ/ಗೋವಾ, ಫೆ.4: ಪಂಜಾಬ್ ಹಾಗೂ ಗೋವಾ ವಿಧಾನಸಭಾಗಳಿಗೆ ಶನಿವಾರ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಮೂಲಕ ಒಂದು ತಿಂಗಳ ಕಾಲ ನಡೆಯಲಿರುವ ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ಚಾಲನೆ ದೊರೆತಿದೆ.
ನವೆಂಬರ್‌ನಲ್ಲಿ ನೋಟ್ ಬ್ಯಾನ್‌ಗೊಂಡ ಬಳಿಕ ಆಡಳಿತಾರೂಢ ಬಿಜೆಪಿಗೆ ಇದು ಅತ್ಯಂತ ಮುಖ್ಯ ಚುನಾವಣೆಯಾಗಿದೆ. ಬಿಜೆಪಿ ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಪಂಜಾಬ್‌ನಲ್ಲಿ ಅಕಾಲಿ ದಳದ ಮೈತ್ರಿಯೊಂದಿಗೆ ಅಧಿಕಾರ ನಡೆಸಿದೆ. ಕಾಂಗ್ರೆಸ್ ಉಭಯ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ.
ಈ ಎರಡೀ ಪಕ್ಷಗಳಿಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತೀವ್ರ ಸ್ಪರ್ಧೆಯೊಡ್ಡುತ್ತಿದೆ. ಪಂಜಾಬ್‌ನಲ್ಲಿ 117 ಕ್ಷೇತ್ರಗಳು, ಗೋವಾದಲ್ಲಿ 40 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಎರಡೂ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಶನಿವಾರ ಬೆಳಗ್ಗೆ 7:30ಕ್ಕೆ ಮತಗಟ್ಟೆಗೆ ಆಗಮಿಸಿ ಸರದಿ ಸಾಲಲ್ಲಿ ನಿಂತು ಮತ ಚಲಾಯಿಸಿದ್ದಾರೆ. 2012ರಲ್ಲಿ ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾಯಕತ್ವವಹಿಸಿದ್ದ ಪಾರಿಕ್ಕರ್ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಪಂಜಾಬ್‌ನಲ್ಲಿ ಬಿಜೆಪಿಯು ಶಿರೋಮಣಿ ಅಕಾಲಿದಳ ದೊಂದಿಗೆ 10ವರ್ಷ ಆಡಳಿತ ನಡೆಸಿದ್ದು, ಹ್ಯಾಟ್ರಿಕ್ ಸಾಧಿಸುವ ವಿಶ್ವಾಸದಲ್ಲಿದೆ.