ಜಾಮೀನಿಗಾಗಿ ಶ್ಲೋಕಗಳನ್ನು ಪಠಿಸಲು ವಿದ್ಯಾರ್ಥಿಗಳಿಗೆ ಕೋರ್ಟ್ ಆದೇಶ !

Update: 2017-02-04 17:49 GMT

ಕೊಯಮತ್ತೂರು,ಫೆ.4: ವಿಭಿನ್ನ ತೀರ್ಪೊಂದರಲ್ಲಿ ಇಲ್ಲಿಗೆ ಸಮೀಪದ ಮೆಟ್ಟುಪಾಳ್ಯಮ್ ನ ನ್ಯಾಯಾಲಯವು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ನೀಡಲು ಷರತ್ತಾಗಿ ಹತ್ತು ದಿನಗಳ ಕಾಲ ಪ್ರತಿದಿನ ಸಂತ ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಗ್ರಂಥದಲ್ಲಿಯ 100 ಶ್ಲೋಕಗಳನ್ನು ಪಠಿಸುವಂತೆ ಆದೇಶಿಸಿದೆ.

ಶುಕ್ರವಾರ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಈ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

10 ದಿನಗಳ ಕಾಲ ಪ್ರತಿದಿನ ಮೆಟ್ಟುಪಾಳ್ಯಮ್‌ನ ಸರಕಾರಿ ಬಾಲಕರ ಪ್ರೌಢ ಶಾಲೆಯ ತಮಿಳು ಶಿಕ್ಷಕರ ಎದುರು ಹಾಜರಾಗಿ ತಿರುಕ್ಕುರಳ್‌ನಲ್ಲಿಯ 100 ಶ್ಲೋಕಗಳನ್ನು ಪಠಿಸುವಂತೆ ನ್ಯಾ.ಸುರೇಶ ಕುಮಾರ ಆದೇಶಿಸಿದರು. ಹತ್ತು ದಿನಗಳು ಅಂತ್ಯಗೊಂಡ ಬಳಿಕ ಶಾಲಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಬೇಕು ಮತ್ತು ಅದನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕು ಎಂದೂ ಅವರು ನಿರ್ದೇಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News