ಸಿಎಂ ಪಟ್ಟ ಪಡೆಯಲು ಶಶಿಕಲಾ ಪಟ್ಟು; ಮಧ್ಯಾಹ್ನ 3 ಗಂಟೆಗೆ ಶಾಸಕರ ಸಭೆ
Update: 2017-02-05 12:50 IST
ಚೆನ್ನೈ, ಫೆ.5: ಮುಖ್ಯ ಮಂತ್ರಿಯಾಗುವ ತಯಾರಿಯಲ್ಲಿರುವ ಎಐಎಡಿಎಂಕೆ ಮುಖ್ಯಸ್ಥೆ ವಿ.ಕೆ.ಶಶಿಕಲಾ ವಿರುದ್ಧ ರಾಜ್ಯದ ಹಲವಡೆ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಶಶಿಕಲಾ ವಿರೋಧಿ ಅಲೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಸಿಎಂ ಪಟ್ಟ ಪಡೆಯಲು ಸಮಸ್ಯೆ ಎದುರಾಗಿದೆ.
ಮಧ್ಯಾಹ್ನ 3 ಗಂಟೆಗೆ ಎಐಎಡಿಎಂಕೆ ಶಾಸಕರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ
ಶಶಿಕಲಾ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮುಖ್ಯ ಮಂತ್ರಿ ಎಂ.ಪನ್ನೀರ್ ಸೆಲ್ವಂ, ಆರು ಮಂದಿ ಸಚಿವರು, ಮೂರು ಶಾಸಕರು ಇಂದು ಬೆಳಗ್ಗೆ ಶಶಿಕಲಾರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಕಂಡು ಬಂದ ಶಶಿಕಲಾ ವಿರೋಧಿ ಅಲೆ ಇದೀಗ ತೀವ್ರಗೊಂಡಿದ್ದು, ಇದು ಆಕೆಯ ಬೆಂಬಲಿಗರಿಗೆ ಆಘಾತ ನೀಡಿದೆ.