ಮುಹಮ್ಮದ್ ರಿಯಾಝ್ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ
ಕೊಚ್ಚಿ,ಫೆ.5: ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರಾಗಿ ಅಡ್ವೊಕೇಟ್ ಪಿ.ಐ. ಮುಹಮ್ಮದ್ ರಿಯಾಝ್ ಆಯ್ಕೆಯಾಗಿದ್ದಾಗಿದ್ದಾರೆ. ಎರ್ನಾಕುಲಂನಲ್ಲಿ ನಡೆಯುವ ಡಿವೈಎಫ್‌ಐ ರಾಷ್ಟ್ರೀಯ ಸಮ್ಮೇಳನದಲ್ಲಿ ಇದಕ್ಕೆ ಸಂಬಂಧಿಸಿದ ತೀರ್ಮಾನವಾಗಿದೆ.
ಈಗಿನ ಅಧ್ಯಕ್ಷ ಎಂಬಿ ರಾಜೇಶ್ ಸ್ಥಾನದಿಂದ ನಿವೃತ್ತರಾಗುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಿಯಾಝ್ ರ ಜೊತೆ ಮಹಾರಾಷ್ಟ್ರದ ಅಖಿಲಭಾರತ ಉಪಾಧ್ಯಕ್ಷೆ ಪ್ರೀತಿ ಶೇಖರ್ ಕೂಡಾ ಸ್ಪರ್ಧಿಸಿದ್ದರು. ಆದರೆ ರಿಯಾರ್ ಆಯ್ಕೆಯಾಗಿದ್ದಾರೆ.
ಈಗ ರಿಯಾರ್ ಅಖಿಲಭಾರತ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2009ರ ಚುನಾವಣೆಯಲ್ಲಿ ಕಲ್ಲಿಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಕೆಲವು ಸಮಯದಿಂದ ಅವರು ದಿಲ್ಲಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಘಟನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಲುವಾಗಿ ಪ್ರೀತಿ ಶೇಖರ್‌ರನ್ನು ಅಖಿಲಭಾರತ ಅಧ್ಯಕ್ಷೆಯಾಗಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬ್ಯಾಂಕ್ ಅಧಿಕಾರಿಯಾಗಿರುವ ಪ್ರೀತಿ ಶೇಖರ್‌ಗೆ ಸಂಪೂರ್ಣ ಸಮಯವನ್ನು ಸಂಘಟನೆಗೆ ಮೀಸಲಿಡಲು ಸಾಧ್ಯವಿಲ್ಲ. ಕೆಲಸಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಕಾರಣದಿಂದ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಿಲ್ಲ ಎಂದು ವರದಿ ತಿಳಿಸಿದೆ.