ಕೇರಳ ಎಸೆಸೆಲ್ಸಿ ಪರೀಕ್ಷೆ ಮಾರ್ಚ್ 8ರಿಂದ 27ರವರೆಗೆ
ತಿರುವನಂತಪುರಂ,ಫೆ.6: ಎಸೆಸೆಲ್ಸಿ ಪರೀಕ್ಷೆ ಮಾರ್ಚ್ ಎಂಟರಿಂದ 27ರವರೆಗೆ ನಡೆಯಲಿದೆ. ಮಾರ್ಚ್ ಎಂಟಕ್ಕೆ ಎಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 23ನ್ನು ಉಕೊನೆಯ ದಿನಾಂಕವೆಂದು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಅಧ್ಯಾಪಕರ ಸಂಘಟನೆಗಳ ನಾಯಕರ ಸಭೆಯಲ್ಲಿ ಟೈಂಟೇಬಲ್‌ನಲ್ಲಿ ಅಲ್ಪ ಬದಲಾವಣೆಯನ್ನು ಮಾಡಲು ನಿರ್ಧರಿಸಲಾಯಿತೆಂದು ವರದಿಯಾಗಿದೆ. ಮಾರ್ಚ್ 16ಕ್ಕೆ ನಿರ್ಧರಿಸಲಾಗಿದ್ದ ಸೋಶಿಯಲ್ ಸೈನ್ಸ್ ಪರೀಕ್ಷೆಯನ್ನು ಬದಲಾಯಿಸಿ ಅಂದು ಫಿಸಿಕ್ಸ್ ಪರೀಕ್ಷೆ ನಡೆಸುವುದೆಂದು ತೀರ್ಮಾನಿಸಲಾಗಿದೆ. ಅಂದು ನಡೆಯಬೇಕಿದ್ದ ಸೋಶಿಯಲ್ ಸೈನ್ಸ್ ಪರೀಕ್ಷೆಯನ್ನು 27ಕ್ಕೆ ಸ್ಥಾನಾಂತರಿಸಲಾಗಿದೆ. ಮಾರ್ಚ್ 14ಕ್ಕೆ ಹಿಂದಿ ಪರೀಕ್ಷೆಯ ನಡೆಸಲಾಗುವುದು. ಅದರ ಮರುದಿನ ಮಾರ್ಚ್ 15ರಂದು ರಜೆ ಇದೆ. ಫಿಸಿಕ್ಸ್ ಪರೀಕ್ಷೆಗಿಂತ ಮೊದಲು ರಜೆ ಬೇಕೆಂದು ಬೇಡಿಕೆ ಕೇಳಿ ಬಂದಿತ್ತು ಈ ಬೇಡಿಕೆಯನ್ನು ಪರಿಗಣಿಸಲಾಗಿದ್ದು ಫಿಸಿಕ್ಸ್ ಪರೀಕ್ಷೆಯನ್ನು 16ನೆ ತಾರೀಕಿಗೆ ಇಟ್ಟುಕೊಳ್ಳಲಾಗಿದೆ. ಈ ಹಿಂದೆ 21ನೆ ತಾರೀಕಿಗೆ ಫಿಸಿಕ್ಸ್ ಪರೀಕ್ಷೆ ನಿಶ್ಚಯಿಸಲಾಗಿತ್ತು. ಹೊಸ ಪರಿಷ್ಕೃತ ವೇಳಾಪಟ್ಟಿಯಂತೆ ಅಂದು ಯಾವುದೇ ಪರೀಕ್ಷೆ ಇರುವುದಿಲ್ಲ.
ಹೊಸ ವೇಳಾಪಟ್ಟಿ
ಮಾರ್ಚ್ 8: ಮಲಯಾಳಂ, ಒಂದನೆ ಭಾಷೆ ಭಾಗ 1
ಮಾರ್ಚ್: ಮಲಯಾಳಂ ಒಂದನೆ ಭಾಷೆ ಭಾಗ2
ಮಾರ್ಚ್13 ಇಂಗ್ಲಿಷ್
ಮಾರ್ಚ್ 14: ಹಿಂದಿ
ಮಾರ್ಚ್ 16: ಫಿಸಿಕ್ಸ್
ಮಾರ್ಚ್ 20: ಗಣಿತ
ಮಾರ್ಚ್ 22: ಕೆಮಿಸ್ಟ್ರಿ
ಮಾರ್ಚ್ 23: ಬಯಾಲಜಿ
ಮಾರ್ಚ್ 27: ಸೋಶಿಯಲ್ ಸೈನ್ಸ್
ಟೈಂಟೇಬಲ್‌ನಲ್ಲಿ ಬದಲಾವಣೆ: ಮಾದರಿ ಪರೀಕ್ಷೆ ಫೆ.13ರಿಂದ 21ರವರೆಗೆ
ಮಾರ್ಚ್ 31ಕ್ಕೆ ಸ್ಕೂಲ್‌ಗೆ ರಜೆ ಸಿಗಲಿದೆ. ಮಾದರಿ ಪರೀಕ್ಷೆ ಫೆ.13ರಿಂದ 21ರವರೆಗೆ ನಡೆಯಲಿದೆ. ಐಟಿ ಪರೀಕ್ಷೆ ಫೆಬ್ರವರಿ 22ರಿಂದ ಮಾರ್ಚ್ ಎರಡರವರೆಗೆ ನಡೆಯಲಿದೆ. ಹತ್ತನೆ ತರಗತಿ ಹೊರತು ಪಡಿಸಿದ ಉಳಿದ ತರಗತಿಗಳ ಪರೀಕ್ಷೆಯು ಮಾರ್ಚ್ 1, 2, 3, 6, 28, 29, 30ಕ್ಕೆ ನಡೆಯಲಿದೆ. ಕರೆನ್ಸಿ ಅಭಾವ ಇರುವುದರಿಂದ ಎಸೆಸೆಲ್ಸಿ ಪರೀಕ್ಷಾ ಶುಲ್ಕವನ್ನು ನಂತರವೂ ಸ್ವೀಕರಿಸಲು ನಿರ್ಧರಿಸಲಾಗಿದೆ.