×
Ad

ಶಶಿಕಲಾ ಪ್ರಮಾಣಕ್ಕೆ ತಡೆ ನೀಡುವಂತೆ ಸುಪ್ರೀಂಗೆ ಮನವಿ

Update: 2017-02-06 19:43 IST

ಚೆನ್ನೈ, ಫೆ.6: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದ ತೀರ್ಪು  ಹೊರಬರುವ ತನಕ ಶಶಿಕಲಾ ನಟರಾಜನ್ ಅವರಿಗೆ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆ ವಿಧಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ತಮಿಳುನಾಡಿನ "ಸಟ್ಟಾ ಪಂಚಾಯತ್‌" ಸಮಾಜ ಸೇವಾ ಸಂಸ್ಥೆಯಿಂದ ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿ ಚಿನ್ನಮ್ಮ ಅವರ ಪದಗ್ರಹಣಕ್ಕೆ ತಡೆ ನೀಡುವಂತೆ ಮನವಿ ಮಾಡಿದೆ.
ಆದಾಯಕ್ಕಿಂತ ಆಸ್ತಿ ಗಳಿಕೆಯ ಆರೋಪದಲ್ಲಿ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಅವರು ಮೊದಲ ಆರೋಪಿಯಾಗಿದ್ದರೆ. ಅವರ ಸ್ನೇಹಿತೆ ಶಶಿಕಲಾ ಎರಡನೆ ಆರೋಪಿಯಾಗಿದ್ದಾರೆ. ಜಯಲಲಿತಾ ಮತ್ತು  ಶಶಿಕಲಾ ಅವರಿಗೆ ಕರ್ನಾಟಕ ಹೈಕೋರ್ಟ್‌ ಕ್ಲೀನ್‌ ಚಿಟ್‌ ನೀಡಿತ್ತು. ಆದರೆ  ಕರ್ನಾಟಕ ಸರಕಾರ ಹೈಕೋರ್ಟ್‌‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಕಳೆದ ಎಂಟು ತಿಂಗಳಿನಿಂದ ಕಾಯ್ದಿರಿಸಿರುವ  ತೀರ್ಪು ಮುಂದಿನ ವಾರ ಪ್ರಕಟಗೊಳ್ಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News