×
Ad

ಮಲಪ್ಪುರಂ ತಾನೂರಿನಲ್ಲಿ 8 ಸಿಪಿಎಂ ಕಾರ್ಯಕರ್ತರಿಗೆ ಇರಿತ

Update: 2017-02-06 23:51 IST

ತಾನೂರ್, ಫೆ.6: ಮಲಪ್ಪುರಂನ ತಾನೂರಿನಲ್ಲಿ ಎಂಟು ಸಿಪಿಎಂ ಕಾರ್ಯಕರ್ತರಿಗೆ ಇರಿದ ಘಟನೆ ನಡೆದಿದೆ. ಇವರನ್ನು ಕಲ್ಲಿಕೋಟೆ ಮೆಡಿಕಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಲ್ಲಿ ನಾಲ್ವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಮೈದಾನದಲ್ಲಿ ನಿದ್ರಿಸುತ್ತಿದ್ದವರಿಗೆ ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದಾರೆ. ಘಟನೆಯ ಹಿಂದೆ ಮುಸ್ಲಿಂ ಲೀಗ್ ಇದೆ ಎಂದು ಸಿಪಿಎಂ ಆರೋಪಿಸಿದೆ. ಘಟನೆಯನ್ನು ಪ್ರತಿಭಟಿಸಿ ನಿರಮರುತೂರ್ ಪಂಚಾಯತ್‌ನಲ್ಲಿ ಸಿಪಿಎಂ ಹರತಾಳ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News