ರಿಯಾದ್: ಅನೈತಿಕಚಟುವಟಿಕೆ, ಮದ್ಯದಕೇಂದ್ರ ನಡೆಸುತ್ತಿದ್ದ 29 ಮಹಿಳೆಯರು,3 ಪಾಕಿಸ್ತಾನಿಯರ ಬಂಧನ!
Update: 2017-02-07 16:58 IST
ರಿಯಾದ್,ಫೆ. 7: ಸೌದಿಅರೇಬಿಯದ ರಿಯಾದ್ ದಕ್ಷಿಣದ ಭಾಗದಲ್ಲಿ ಅನೈತಿಕ ಚಟುವಟಿಕೆ ಕೇಂದ್ರ ನಡೆಸುತ್ತಿದ್ದ 3 ಮಂದಿ ಪಾಕ್ ಪ್ರಜೆಗಳು ಮತ್ತು 29 ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಕರ್ನಲ್ ಫವ್ವಾಸ್ ಅಲ್‌ಮೈಮಾನ್ ಹೇಳಿದ್ದಾರೆ.
ದಾರುಲ್ ಬೈದಾ ಗ್ರಾಮದಿಂದ ಬಂಧಿಸಲಾದ ಕೇಂದ್ರದಲ್ಲಿದ್ದ ಎಲ್ಲ ಮಹಿಳೆಯರು ಕೆನ್ಯಾ ಪ್ರಜೆಗಳಾಗಿದ್ದಾರೆ. ಇದೇ ಕೇಂದ್ರದಲ್ಲಿ ಮದ್ಯತಯಾರಿಸಲಾಗುತ್ತಿತ್ತು. ಮೂವರು ಪಾಕಿಸ್ತಾನದ ಪ್ರಜೆಗಳು ಮಹಿಳೆಯರನ್ನು ಉಪಯೋಗಿಸಿ ಅನೈತಿಕ ಚಟವಟಿಕೆಗಳನ್ನು ನಡೆಸುತ್ತಿದ್ದರು.
ರಹಸ್ಯ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯಲು ಬಲೆ ಬೀಸಿದ್ದರು. 25ಬ್ಯಾರೆಲ್ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಎಲ್ಲ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪಬ್ಲಿಕ್ ಪ್ರಾಸಿಕ್ಯೂಶನ್‌ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಫವ್ವಾಸ್ ಅಲ್‌ಮೈಮನ್ ಹೇಳಿದ್ದಾರೆಂದು ವರದಿ ತಿಳಿಸಿದೆ.