ಪಾನಿಯಲ್ಲಿ ಟಾಯ್ಲೆಟ್ ಕ್ಲೀನರ್ ಮಿಶ್ರ ಮಾಡಿದ ಪಾನಿಪೂರಿ ವಾಲಾಗೆ ಜೈಲು
Update: 2017-02-07 18:17 IST
ಅಹ್ಮದಾಬಾದ್: ಪಾನಿಪೂರಿ ಪಾನಿಯಲ್ಲಿ ಟಾಯ್ಲೆಟ್ ಕ್ಲೀನರ್ ಮಿಶ್ರಗೊಳಿಸಿದ ಆರೋಪದಲ್ಲಿ ಪಾನಿಪೂರಿವಾಲಾನಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಚೇತನ್ ನಾಂಜಿ ಮಾರ್ವಾಡಿ ಎಂಬವರ ವಿರುದ್ಧ 2009ರಲ್ಲಿ ಈ ಸಂಬಂಧ ಅಹ್ಮದಾಬಾದ್ ಮಹಾನಗರ ಪಾಲಿಕೆಪ್ರಕರಣ ದಾಖಲಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ ವಿಶೇಷ ನ್ಯಾಯಾಲಯ, ಆರೋಪಿಗೆ ಶಿಕ್ಷೆ ವಿಧಿಸಿದೆ.
ಪಾನಿಪೂರಿ ಅಂಗಡಿಯಾತ ಚೆಲ್ಲುವ ನೀರು ಮತ್ತಿತರ ತ್ಯಾಜ್ಯಗಳಿಂದಾಗಿ ಅಕ್ಕಪಕ್ಕದ ರಸ್ತೆಗಳೂ ಹಾಳಾಗುತ್ತಿವೆ ಎಂದು ಪಾಲಿಕೆಗೆ ಬಹಳಷ್ಟು ದೂರುಗಳು ಬಂದಿದ್ದವು. ಇದಕ್ಕೆ ಸ್ಪಂದಿಸಿದ ಮಹಾನಗರ ಪಾಲಿಕೆ, ಆಹಾರದ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿಕೊಟ್ಟಿತ್ತು. ಆಕ್ಸಾಲಿಕ್ ಆಸಿಡ್ ಎಂಬ ಟಾಯ್ಲೆಟ್ ಕ್ಲೀನರ್ ಅನ್ನು ಬಳಸಲಾಗಿದೆ ಎಂದು ಪ್ರಯೋಗಾಲಯ ಖಚಿತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಲಬೆರಕೆ ಪ್ರಕರಣ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಆದರೆ ಆರೋಪಿ ಪರ ವಕೀಲ, ಈ ವಾದವನ್ನು ಅಲ್ಲಗಳೆದಿದ್ದರು.