×
Ad

ಕಾಶ್ಮೀರದಲ್ಲಿ ‘ತಾಂತ್ರಿಕ್ ಮಸಾಜ್’ ನೆಪದಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಯೋಗ ಗುರು

Update: 2017-02-08 23:32 IST

ಮಾಪುಸಾ,ಫೆ.8: ಉತ್ತರ ಗೋವಾದ ಕೋರಗಾವ್ ಎಂಬಲ್ಲಿ ತಾಂತ್ರಿಕ್ ಮಸಾಜ್ ಮಾಡುವ ನೆಪದಲ್ಲಿ ಅಮೆರಿಕನ್ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಯೋಗ ಶಿಕ್ಷಕನೋರ್ವನನ್ನು ಪೆರ್ನೆಂ ಪೊಲೀಸರು ಬಂಧಿಸಿದ್ದಾರೆ.

ಫೆ.2ರಂದು ಈ ಘಟನೆ ನಡೆದಿದೆ. ಆರೋಪಿ ಪ್ರತೀಕ್ ಕುಮಾರ್ ಅಗರ್‌ವಾಲ್(38) ತನಗೆ ತಾಂತ್ರಿಕ್ ಮಸಾಜ್ ಮಾಡುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಕೆನಡಾದ ಮಹಿಳೆಯೋರ್ವಳ ಜೊತೆಗೂ ಅಗರ್‌ವಾಲ್ ಇದೇ ಅಪರಾಧವನ್ನೆಸಗಿದ್ದಾನೆ ಎಂದೂ ಮಹಿಳೆ ಆರೋಪಿಸಿದ್ದಾಳೆ. ಅಗರ್‌ವಾಲ್‌ನ ಏಳು ದಿನಗಳ ಯೋಗ ಕೋರ್ಸ್‌ಗೆ ಹಾಜರಾಗಲು ಈ ಮಹಿಳೆ ಜ.31ರಂದು ಗೋವಾಕ್ಕೆ ಆಗಮಿಸಿದ್ದಳು. ವೆಬ್‌ಸೈಟ್‌ನಲ್ಲಿ ಈ ಕೋರ್ಸ್ ಕುರಿತು ಅಗರ್‌ವಾಲ್ ನೀಡಿದ್ದ ಜಾಹೀರಾತಿನಿಂದ ಪ್ರಭಾವಿತಳಾಗಿದ್ದ ಆಕೆ ಆನ್‌ಲೈನ್ ಮೂಲಕ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಳು. ಕೋರ್ಸ್‌ನ ಶುಲ್ಕದಲ್ಲಿ ವಸತಿ ಮತ್ತು ಊಟ ಸೇರಿತ್ತು. ಸಂತ್ರಸ್ತ ಮಹಿಳೆ ಇತರ ದೇಶಗಳ ಏಳು ಮಹಿಳೆಯರ ಗುಂಪಿನ ಜೊತೆಗೆ ಇಲ್ಲಿಗೆ ಬಂದಿದ್ದಳು ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News