ಚೆನ್ನೈ ಪೊಲೀಸ್ ಆಯುಕ್ತ ಎಸ್ .ಜಾರ್ಜ್ ವರ್ಗಾವಣೆ
Update: 2017-02-09 13:25 IST
ಚೆನ್ನೈ, ಫೆ.9: ಚೆನ್ನೈ ನಗರ ಪೊಲೀಸ್ ಆಯುಕ್ತರಾಗಿದ್ದ ಎಸ್. ಜಾರ್ಜ್ ಅವರನ್ನು ವರ್ಗಾಯಿಸಲಾಗಿದ್ದು, ತೆರವಾಗಿರುವ ಸ್ಥಾನಕ್ಕೆ ಸಂಜಯ್ ಅರೋರಾ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಜಲ್ಲಿಕಟ್ಟು ಪ್ರತಿಭಟನೆಯ ಮೇಲೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಜಾರ್ಜ್ ಅವರನ್ನು ವರ್ಗಾಯಿಸಲಾಗಿದೆ. ಜಾರ್ಜ್ ಅವರು ತಮಿಳುನಾಡಿನ ಎಐಎಡಿಎಂಕೆ ಅಧಿ ನಾಯಕಿ ಆಪ್ತರು ಎಂದು ಹೇಳಲಾಗಿದೆ. ಎಸ್. ಜಾರ್ಜ್ ಅವರನ್ನು ಎತ್ತಂಗಡಿ ಮಾಡುವ ಮೂಲಕ ಚಿನ್ನಮ್ಮ ಅವರಿಗೆ ಉಸ್ತುವಾರಿ ಮುಖ್ಯ ಮಂತ್ರಿ ಪನ್ನೀರ‍್ ಸೆಲ್ವಂ ಆಘಾತ ನೀಡಿದ್ದಾರೆ.
,,,,,,,,,,,,,,