×
Ad

ಉಪಹಾರ್ ಬೆಂಕಿ ದುರಂತ : ಸುಪ್ರೀಂ ಕೋರ್ಟ್ ತೀರ್ಪಿಗೆ ಮೃತರ ತಾಯಿಯ ಪ್ರತಿಕ್ರಿಯೆ ಏನು ಗೊತ್ತೇ ?

Update: 2017-02-09 16:46 IST

ನವದೆಹಲಿ,ಫೆ.9 : ಉಪಹಾರ್ ಬೆಂಕಿ ದುರಂತ ಪ್ರಕರಣದಲ್ಲಿ ಗುರುವಾರ ತೀರ್ಪು ನೀಡಿದ ಸುಪ್ರೀಂ ಕೋರ್ಟ್ರಿಯಲ್ ಎಸ್ಟೇಟ್ ಉದ್ಯಮಿ ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲು ಶಿಕ್ಷೆ ಘೋಷಿಸಿದೆ. ಅವರೀಗಾಗಲೇ ನಾಲ್ಕು ತಿಂಗಳು ಜೈಲು ಶಿಕ್ಷೆ ಪೂರ್ತಿಗೊಳಿಸಿದ್ದಾರೆ.

ಆದರೆ ಈದುರಂತದಲ್ಲಿ ತನ್ನ ಮಕ್ಕಳನ್ನು ಕಳೆದುಕೊಂಡಿರುವ ನೀಲಂ ಕೃಷ್ಣಮೂರ್ತಿ ಇಂದಿನ ತೀರ್ಪಿನಿಂದ ತನಗೆ ನ್ಯಾಯಾಂಗದಮೇಲಿನ ವಿಶ್ವಾಸ ಕಳೆದು ಹೋಗಿದೆ ಎಂದು ಹೇಳಿದ್ದಾರೆ.

‘‘ಶ್ರೀಮಂತರಿಗೆ ವಿಶೇಷ ಹಕ್ಕುಗಳಿವೆಯೆಂದು ಸುಪ್ರೀಂ ಕೋರ್ಟ್ ತೋರಿಸಿದೆ.ಅವರು ಮಕ್ಕಳನ್ನು ಕೊಂದಿದ್ದರೂ ಟ್ರಾಮಾ ಕೇಂದ್ರವೊಂದಕ್ಕೆ ಹಣ ನೀಡಿ ಬಚಾವ್ ಆಗಿದ್ದಾರೆ. ಟ್ರಾಮಾ ಸೆಂಟರ್ ಬಗ್ಗೆನಾವು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಮಕ್ಕಳು ಸತ್ತ ದಿನವೇ ಈ ಜನರನ್ನುಗುಂಡಿಟ್ಟು ಸಾಯಿಸಬೇಕಿತ್ತು. ನನಗೆ ತೀರ್ಪಿನಿಂದ ತೀರಾ ನಿರಾಸೆಯಾಗಿದೆ.ನ್ಯಾಯಾಲಯಕ್ಕೆ ಮೊರೆ ಹೋಗಿ ನಾನು ನನ್ನ ಜೀವನದ ದೊಡ್ಡ ತಪ್ಪು ಮಾಡಿದ್ದೇನೆ. ನ್ಯಾಯಾಂಗದಲ್ಲಿ ನನಗಿದ್ದ ನಂಬಿಕೆ ಹೊರಟು ಹೋಗಿದೆ,’’ ಎಂದು ಅವರು ದುಃಖದಿಂದ ಹೇಳಿದ್ದಾರ.

ಆರೋಪಿ ಅನ್ಸಾಲ್ ಸಹೋದರರು ತಲಾ ರೂ 30 ಕೋಟಿ ದಂಡ ಮೊತ್ತವನ್ನು ಮೂರು ತಿಂಗಳ ಒಳಗೆ ಪಾವತಿಸದೇ ಇದ್ದರೆ ಅವರುಮೂರು ವರ್ಷ ಕಠಿಣ ಸಜೆ ಅನುಭವಿಸಬೇಕೆಂದು ಸುಪ್ರೀಂ ಕೋರ್ಟ್ ಆಗಸ್ಟ್ 19,2015ರಂದು ನೀಡಿದ ತೀರ್ಪನ್ನುಮರು ಪರಿಶೀಲಿಸುವಂತೆ ಕೋರಿ ಸಿಬಿಐ ಹಾಗೂ ಕೃಷ್ಣಮೂರ್ತಿಯವರ ಉಪಹಾರ್ ದುರಂತ ಸಂತ್ರಸ್ತರ ಸಂಸ್ಥೆಮನವಿ ಸಲ್ಲಿಸಿತ್ತು.

ಉಪಹಾರ್ಚಿತ್ರಮಂದಿರದಲ್ಲಿ ಬಾರ್ಡರ್ ಚಿತ್ರದ ಪ್ರದರ್ಶನ ಜೂನ್ 13, 1997ರಲ್ಲಿ ನಡೆಯುತ್ತಿದ್ದಾಗ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಟ್ಟು 59 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದರೆ, ನಂತರ ಉಂಟಾದ ನೂಕುನುಗ್ಗಲಿನಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಉಪಹಾರ್ ದುರಂತ ಸಂತ್ರಸ್ತರ ಸಂಸ್ಥೆಯಅಧ್ಯಕ್ಷೆ ನೀಲಂ ಕೃಷ್ಣಮೂರ್ತಿ ಈ ದುರಂತದಲ್ಲಿ ತಮ್ಮಿಬ್ಬರು ಹದಿಹರೆಯದ ಮಕ್ಕಳನ್ನು ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News