ಶಶಿಕಲಾರಿಗೆ ಕಾಂಗ್ರೆಸ್‌ನ ಬೆಂಬಲವಿಲ್ಲ
ಚೆನ್ನೈ,ಫೆ.10: ತಮಿಳುನಾಡಿನಲ್ಲಿ ಕಾಂಗ್ರೆಸ್ ಶಶಿಕಲಾರನ್ನು ಬೆಂಬಲಿಸುವುದಿಲ್ಲ ಮತ್ತು ಡಿಎಂಕೆಯೊಂದಿಗಿನ ಅದರ ಮೈತ್ರಿ ಮುಂದುವರಿಯಲಿದೆ. ಆದರೆ ಕಾಂಗ್ರೆಸ್ ನಾಯಕ ಎಸ್.ತಿರುನಾವುಕ್ಕರಸ್ ಮಾತ್ರ ಈಗ ಶಶಿಕಲಾರ ಬೆಂಬಲಕ್ಕೆ ನಿಂತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಹಿಂದೆ ಬೆಂಬಲ ಕೋರಿ ಎಐಡಿಎಂಕೆ ಶಶಿಕಲಾ ವಿಭಾಗ ಕಾಂಗ್ರೆಸನ್ನು ಸಂಪರ್ಕಿಸಿತ್ತು.ಶಶಿಕಲಾರಿಗೆ ಹತ್ತಿರವಾಗದಂತೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ವಿರೋಧಿಸಿ ರಂಗಪ್ರವೇಶಿಸಿದ್ದಾರೆ.
ಇದೇವೇಳೆ, ಕಾಂಗ್ರೆಸ್ ಹೈಕಮಾಂಡ್ ತಮಿಳುನಾಡಿನ ನಾಯಕರೊಂದಿಗೆ ದಿಲ್ಲಿಯಲ್ಲಿ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸುತ್ತಿದೆ. ಕಾಂಗ್ರೆಸ್ ನಾಯಕಿ ಖುಶ್ಬೂ ಶಶಿಕಲಾರಿಗೆ ಶಾಸಕರ ಬೆಂಬಲವಿದ್ದರೆ ಅದನ್ನು ಸಾಬೀತುಪಡಿಸಲು ಅವಕಾಶ ನೀಡಬೇಕಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪನ್ನೀರ್‌ಸೆಲ್ವಂ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ಸಾಧ್ಯತೆ ಹೆಚ್ಚು ದೃಢವಾಗಿದೆ. ಇದೇವೇಳೆ ಖುಶ್ಬೂ "ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಯತ್ನ ನಡೆದರೆ ಅದು ನಾಚಿಕೆಗೇಡು. ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ" ಎಂದು ಹೇಳಿದ್ದಾರೆ.