ಸ್ನಾಪ್‌ಡೀಲ್ : ಶೇ.30ರಷ್ಟು ಉದ್ಯೋಗಿಗಳ ವಜಾ

Update: 2017-02-11 07:51 GMT

ಬೆಂಗಳೂರು,ಫೆ. 11: ಕಠಿಣ ಸ್ಪರ್ಧೆಗಳಿಂದಾಗಿ ವರಮಾನದಲ್ಲಿ ಇಳಿಕೆಯಾದ ಪರಿಣಾಮ ಸ್ನಾಪ್‌ಡೀಲ್ ಶೇ.30ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲು ತೀರ್ಮಾನಿಸಿದೆ.ಖರ್ಚು ಕಡಿಮೆ ಮಾಡುವುದರ ಭಾಗವಾಗಿ ಮುಂದಿನ ಎರಡು ತಿಂಗಳೊಳಗೆ ಇಷ್ಟು ಮಂದಿಯನ್ನು ಕಂಪೆನಿ ಕೆಲಸದಿಂದ ತೆಗೆದು ಹಾಕಲಿದೆ.

ಕಂಪೆನಿಯಲ್ಲಿ ನೇರವಾಗಿ ಕೆಲಸ ಮಾಡುತ್ತಿರುವವರಲ್ಲಿ ಸಾವಿರದಷ್ಟು ಮಂದಿ ಕಂಪೆನಿ ನಿರ್ಧಾರದಿಂದಾಗಿ ಕೆಲಸ ಕಳಕೊಳ್ಳಲಿದ್ದಾರೆ. ಅದೇ ವೇಳೆ ವಿತರಣಾ ಕ್ಷೇತ್ರದಲ್ಲಿ ದುಡಿಯುವವರಿಗೂ ನಿರ್ಧಾರ ಬಾಧಕವಾಗಲಿದೆ.

ಕಂಪೆನಿಯ ಕೆಲಸಗಾರರ ಸಂಖ್ಯೆ ಕಡಿತಗೊಳಿಸಲು ಆಪರೇಶನ್ ವಿಭಾಗದ ಮ್ಯಾನೇಜರ್‌ಗಳಿಗೆ ಕಂಪೆನಿ ಇಮೈಲ್ ಕಳುಹಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News