×
Ad

ಮಹಿಳೆಯರು ಕಾರುಗಳಿದ್ದಂತೆ, ರಸ್ತೆಗಿಳಿದರೆ ಢಿಕ್ಕಿಯಾಗಬಹುದು ಎಂದ ಆಂಧ್ರದ ಸ್ಪೀಕರ್!

Update: 2017-02-11 13:25 IST

ಹೈದರಾಬಾದ್,ಫೆ. 11: ಮಹಿಳೆಯರನ್ನು ಕಾರುಗಳಿಗೆ ಹೋಲಿಸಿ ಆಂಧ್ರಪ್ರದೇಶದ ಸ್ಪೀಕರ್ ಕೋಡ್ಲ ಶಿವಪ್ರಸಾದ್ ರಾವ್ ವಿವಾದ ಸೃಷ್ಟಿಸಿದ್ದಾರೆ.

ಕಾರುಗಳು ರಸ್ತೆಗಿಳಿದರೆ ಢಿಕ್ಕಿಯಾಗುವುದು, ಅಪಘಾತವಾಗುವುದೆಲ್ಲವೂ ಸಾಮಾನ್ಯ. ಮಹಿಳೆಯರು ರಸ್ತೆಗಿಳಿದರೂ ಹಾಗೆಯೇ ಸಂಭವಿಸುತ್ತದೆ ಎಂದು ಸ್ಪೀಕರ್ ಹೇಳಿದ್ದಾರೆ. ಅವರು ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

ಹಿಂದಿನ ಕಾಲದಲ್ಲಿ ಮಹಿಳೆಯರು ಕೇವಲ ಗೃಹಿಣಿಯರು ಮಾತ್ರ ಆಗಿದ್ದರು. ಅಂದು ಅವರು ಎಲ್ಲ ರೀತಿಯ ದಾಳಿಗಳಿಂದ ಅವರು ಸುರಕ್ಷಿತರಾಗಿದ್ದರು. ಇಂದು ಅವರು ಕಲಿಯಲು ಹೋಗುತ್ತಿದ್ದಾರೆ. ಕೆಲಸಮಾಡುತ್ತಿದ್ದಾರೆ. ವ್ಯಾಪಾರ ಮಾಡುತ್ತಿದ್ದಾರೆ. ಇಂದು ಮಹಿಳೆಯರು ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆಗ ಕಿರುಕುಳ, ಢಿಕ್ಕಿಹೊಡೆಯುವುದಿತ್ಯಾದಿಗಳಿಗೆ ಅವರು ಬಲಿಯಾಗುತ್ತಿದ್ದಾರೆ ಎಂದು ರಾವ್ ಹೇಳಿದ್ದಾರೆ.

ಕಾರುಗಳು ರಸ್ತೆಗಿಳಿದರೆ ಅಪಘಾತವೂ ಸಂಭವಿಸುತ್ತದೆ. 50ಕಿಲೊಮೀಟರ್ ವೇಗದಲ್ಲಿ ಓಡಿಸಿದರೆ ಸಣ್ಣ ಅಪಘಾತವಾಗುತ್ತದೆ. ವೇಗದ ಮಿತಿ 100 ಕಿಲೋಮೀಟರ್ ಆದರೆ ದೊಡ್ಡ ಅಪಘಾತ ಆಗುತ್ತದೆ. ಆದರೆ ಕಾರನ್ನು ಚಲಾಯಿಸದೆ ಮನೆಯ ಪಾರ್ಕ್‌ನಲ್ಲಿಟ್ಟರೆ ಯಾವ ಅಪಾಯವೂ ಸಂಭವಿಸುವುದಿಲ್ಲ. ಮಹಿಳೆಯರು ಕೂಡಾ ಹೀಗೆಯೇ ಮನೆಯಿಂದ ಹೊರಗಿಳಿಯದಿದ್ದರೆ ಸಮಸ್ಯೆಗಳುಂಟಾಗುವುದಿಲ್ಲ ಎಂದು ಸ್ವೀಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹೇಳಿಕೆ ವಿವಾದವಾಗುವುದರೊಂದಿಗೆ ಸ್ಪಷ್ಟೀಕರಣದೊಂದಿಗೆ ರಂಗಪ್ರವೇಶಿಸಿದ ಅವರು ಸುರಕ್ಷಿತರಾಗಿರಲು ಮನೆಯಲ್ಲಿಯೇ ಇರಬೇಕೆಂದು ತನ್ನ ಮಾತಿ ನ ಅರ್ಥವಲ್ಲ. ಮಹಿಳೆಯರು ಕಲಿಯಲು , ಕೆಲಸ ಮಾಡಲು ಹೋಗುವಾಗ ಸುರಕ್ಷಿತವಾಗಿರಬೇಕೆಂದು ನನ್ನಮಾತಿನ ಉದ್ದೇಶವೆಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಮಹಿಳಾ ಸಂಸತ್ತು ನಡೆಸುವುದರ ಬಗ್ಗೆ ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ಪೀಕರ್ ಇಂತಹ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News