ಏಳೇ ಗಂಟೆಗಳಲ್ಲಿ ಸೂಪರ್ ಹಿಟ್ ಆದ ಆಮಿರ್-ಶಾರುಖ್ ಹೊಸ ಚಿತ್ರ!
Update: 2017-02-11 13:43 IST
ದುಬೈ, ಫೆ.11 : ಶುಕ್ರವಾರ ತಡ ರಾತ್ರಿ ಬಾಲಿವುಡ್ಡಿನ ಪ್ರಖ್ಯಾತ ನಟ ಶಾರುಖ್ ಖಾನ್ ಇನ್ನೊಬ್ಬ ಪ್ರಮುಖ ಖಾನ್ ನಟ ಆಮಿರ್ ಖಾನ್ ಜತೆಗೆ ತಾವು ಕಳೆದ 25 ವರ್ಷಗಳಲ್ಲಿಯೇ ಪ್ರಪ್ರಥಮ ಬಾರಿಗೆ ತೆಗೆದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಅವರಿಬ್ಬರೂ ಉದ್ಯಮಿ ಅಜಯ್ ಬಿಜ್ಲಿಯ ಹುಟ್ಟುಹಬ್ಬ ಆಚರಣೆಗೆ ದುಬೈಗೆ ಆಗಮಿಸಿದ್ದರು.
‘‘ಕಳೆದ 25 ವರ್ಷಗಳಿಂದಲೂ ಪರಿಚಯವಿದ್ದರೂ ನಾವಿಬ್ಬರು ಒಟ್ಟಿಗೆ ತೆಗೆಸಿಕೊಂಡಿರುವ ಪ್ರಥಮ ಫೋಟೋ ಇದು. ಪಾರ್ಟಿಯನ್ನು ಎಂಜಾಯ್ ಮಾಡಿದೆವು’’ ಎಂದು ಶಾರುಖ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದರು. ಅವರು ಈ ಚಿತ್ರ ಪೋಸ್ಟ್ ಮಾಡಿದ ಕೇವಲ ಏಳು ಗಂಟೆಗಳಲ್ಲಿ ಅದಕ್ಕೆ 5,600 ರಿಟ್ವೀಟುಗಳು ಹಾಗೂ 18,000 ಲೈಕುಗಳು ದೊರೆತಿವೆ. ಇಬ್ಬರೂ ಆ ಚಿತ್ರದಲ್ಲಿ ಶ್ವೇತವಸ್ತ್ರಧಾರಿಗಳಾಗಿದ್ದು, ಉದ್ಯಮಿ ಅಜಯ್ ಜತೆ ಕೂಡ ಪೋಸ್ ನೀಡಿದ ಫೋಟೋ ಒಂದಿದೆ.
ಶಾರುಖ್ ಹಾಗೂ ಆಮಿರ್ ಇಬ್ಬರೂ ತಮ್ಮ ಲೇಟೆಸ್ಟ್ ಚಿತ್ರಗಳಾದ ರಈಸ್ ಹಾಗೂ ದಂಗಲ್ ನ ಯಶಸ್ಸಿನ ಖುಷಿಯಲ್ಲಿದ್ದಾರೆ.