×
Ad

ದೀಪಾ ಜಯಕುಮಾರ್ ಪಾರ್ಟಿಗೆ ಅಮ್ಮಾ ಡಿಎಂಕೆ ಎನ್ನುವ ಹೆಸರು?

Update: 2017-02-11 18:06 IST

ಚೆನ್ನೈ,ಫೆ.11: ಶಶಿಕಲಾರ ಕೈವಶವಾಗಿರುವ ಎಡಿಎಂಕೆಗೆ ಬದಲಾಗಿ ಜಯಲಲಿತಾರ ಸೋದರ ಸಂಬಂಧಿ ದೀಪಾ ಜಯಕುಮಾರ್ ರೂಪು ನೀಡಲಿರುವ ಪಕ್ಷಕ್ಕೆ ಅಮ್ಮಾ ಡಿಎಂಕೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎನ್ನುವ ಸೂಚನೆ ಲಭಿಸಿದೆ. ಜಯಲಲಿತಾರ ಜನ್ಮದಿನವಾದ ಫೆ.24ಕ್ಕೆ ದೀಪಾರ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.

ಅದೇ ವೇಳೆ ಉಸ್ತುವಾರಿ ಮುಖ್ಯಮಂತ್ರಿ ಒ. ಪನೀರ್ ಸೆಲ್ವಂರೊಂದಿಗೆ ಸಹಕರಿಸುವ ಸಾಧ್ಯತೆಯನ್ನೂ ದೀಪಾ ನಿರಾಕರಿಸಿಲ್ಲ. ಕಾಂಗ್ರೆಸ್ ವಕ್ತಾರ್ ಇವಿಕೆಎಸ್ ಇಳಂಗೋವನ್ ಸಹೋದರ ಇನಿಯನ್ ಸಂಪತ್ ಅಮ್ಮಾಡಿಎಂಕೆ ಎನ್ನುವ ಹೆಸರಿನಲ್ಲಿ ಪಕ್ಷ ಕಟ್ಟಿದ್ದಾರೆ. ಅವರು ಈ ಹೆಸರನ್ನು ಅವರು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳಲು ಅರ್ಜಿಸಲ್ಲಿಸಿದ್ದಾರೆ. ಆದ್ದರಿಂದ ಅಮ್ಮಾ ಡಿಎಂಕೆ ಎನ್ನುವ ಹೆಸರುದೀಪಾರಿಗೆ ಸಿಗಬೇಕಿದ್ದರೆ ಸಂಪತ್‌ರನ್ನು ಕೂಡಾ ತನ್ನೊಡನೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪನೀರ್ ಸೆಲ್ವಂರನ್ನುಬೆಂಬಲಿಸುವ ವಿಭಾಗ ಎಐಡಿಎಂಕೆ (ಅಮ್ಮಾ) ಎನ್ನುವ ಹೆಸರಿನಲ್ಲಿ ಪಾರ್ಟಿಕಟ್ಟಲಿದೆ ಎನ್ನುವ ಸುದ್ದಿಯೂ ಹರಡಿದೆ. ದೀಪಾ ಜಯಕುಮಾರ್‌ರಿಗೆ ಇದರಲ್ಲಿ ಪ್ರಧಾನಕಾರ್ಯದರ್ಶಿ ಸ್ಥಾನ ವಹಿಸಿಕೊಡುವ ಚಿಂತನೆಯೂ ನಡೆಯುತ್ತಿದೆ.

ಮಾಜಿ ಮುಖ್ಯಮಂತ್ರಿ ಎಐಡಿಎಂಕೆಯನ್ನುಅಮ್ಮಾ ಡಿಎಂಕೆ ಎಂದು ನಿರಂತರ ಹಾಸ್ಯಮಾಡುತ್ತಾ ಬಂದಿದ್ದಾರೆ. ಪಾರ್ಟಿ ಕಾರ್ಯಕರ್ತರ ಒತ್ತಾಯಕ್ಕಾಗಿ ತಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ ಎಂದು ದೀಪಾ ಹೇಳುತ್ತಿದ್ದಾರೆ.

ಜಯಲಲಿತಾರ ಏಕ ಸಹೋದರ ಜಯಕುಮಾರ್‌ರ ಪುತ್ರಿ ದೀಪಾಗೆ ಜಯಲಲಿತಾರ ಹೋಲಿಕೆಯಿದೆ. ದೀಪಾರ ರಾಜಕೀಯ ಪ್ರವೇಶ ಕುರಿತು ಬೋರ್ಡ್‌ಗಳು,ಪೋಸ್ಟರ್‌ಗಳು ಚೆನ್ನೈ ನಗರದಲ್ಲಿ ತಮಿಳ್ನಾಡಿನ ವಿವಿಧ ಭಾಗದಲ್ಲಿ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News