ಮುಖದ ಅಪಾಯಕಾರಿ ಭಾಗ ಎಂದರೇನು ಗೊತ್ತೇ...?

Update: 2017-02-11 13:50 GMT

ಮೂಗಿನ ಕೆಳಭಾಗ,ಮೇಲ್ದುಟಿ ಮತ್ತು ಕೆನ್ನೆಗಳಿಗೆ ಹೊಂದಿಕೊಂಡಿರುವ ಸ್ಥಳ ಮುಖದ ಅಪಾಯಕಾರಿ ಭಾಗದಲ್ಲಿ ಸೇರಿವೆ. ಏಕೆ ಇದು ಅಪಾಯಕಾರಿ ಭಾಗ?

ಮಿದುಳಿನ ಅಭಿಧಮನಿಗಳು ಮತ್ತು ಈ ಭಾಗದ ನಡುವೆ ಸಂಬಂಧವಿರುವುದರಿಂದ ಇದು ಅಪಾಯಕಾರಿಯಾಗಿದೆ. ಇದೇ ಕಾರಣದಿಂದ ಹದಿಹರೆಯದಲ್ಲಿ ಮುಖದಲ್ಲಿ ಮೂಡುವ ಮೊಡವೆಗಳ ಗೋಜಿಗೆ ಹೋಗದಂತೆ ವೈದ್ಯರು ಕಿವಿಮಾತು ಹೇಳುತ್ತಾರೆ. ಮೊಡವೆಗಳನ್ನು ಚಿವುಟುವುದು ಮಿದುಳಿನ ಅಭಿಧಮನಿಗಳಿಗೆ ಸೋಂಕು ಹರಡಲು ಕಾರಣವಾಗಬಹುದು.

ಮುಖದ ಅಭಿಧಮನಿಗಳು ಮತ್ತು ಮಿದುಳಿನ ಅಭಿಧಮನಿಗಳ ನಡುವೆ ಸಂಪರ್ಕವು ಟೆರಿಗಾಯ್ಡ ವೇನಸ್ ನರಜಾಲಗಳು ಮತ್ತು ದೂತ ನಾಳಗಳ ಮೂಲಕ ನಡೆಯುತ್ತದೆ.

ಸಾಮಾನ್ಯವಾಗಿ ಅಭಿಧಮನಿಗಳು ರಕ್ತದ ಹರಿವನ್ನು ನಿರ್ದೇಶಿಸಲು ಕವಾಟಗಳನ್ನು ಹೊಂದಿರುತ್ತವೆ. ಆದರೆ ಮುಖದ ಅಭಿಧಮನಿಯು ಕವಾಟರಹಿತವಾಗಿದೆ. ಸೋಂಕು ಈ ಪ್ರದೇಶದಲ್ಲಿ ಹರಡಲು ಇದು ಕಾರಣವಾಗಿದೆ.

ಈ ಅಭಿಧಮನಿಗಳು ನೇರವಾಗಿ ಮುಖದ ಭಾವನೆಗಳನ್ನು ವ್ಯಕ್ತಪಡಿಸುವ ಸ್ನಾಯುಗಳ ಮೇಲೆ ಸ್ಥಿತಗೊಂಡಿರುತ್ತವೆ. ಈ ಸ್ನಾಯುಗಳ ಚಲನವಲನದಿಂದಾಗಿ ಸೋಂಕು ಮುಖದ ಅಪಾಯಕಾರಿ ಭಾಗದಿಂದ ಮಿದುಳಿನ ಅಭಿಧಮನಿಗಳಿಗೆ ಹರಡುತ್ತದೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News