ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭೂಕಂಪ

Update: 2017-02-12 10:34 GMT

ಡೆಹ್ರಾಡೂನ್,ಫೆ.12: ರುದ್ರಪ್ರಯಾಗದಲ್ಲಿ ಶನಿವಾರ ರಾತ್ರಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.2ರಷ್ಟಿದ್ದು, ರಾಜ್ಯದ ಶ್ರೀನಗರ ಮತ್ತು ಗಡ್ವಾಲ್‌ಗಳಲ್ಲಿ ಕಂಪನ ಅನುಭವಕ್ಕೆ ಬಂದಿತ್ತು.

ರಾತ್ರಿ 11:51ಕ್ಕೆ ಭೂಕಂಪ ಸಂಭವಿಸಿದ್ದು, ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ಪ್ರದೇಶದಲ್ಲಿ ಎರಡು ದಿನಗಳಲ್ಲಿ ಇದು ಎರಡನೇ ಭೂಕಂಪವಾಗಿದೆ. ಶುಕ್ರವಾರ ನೇಪಾಳದ ಪಶ್ಚಿಮ ಭಾಗದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿತ್ತು.

ವಾರದ ಆರಂಭದಲ್ಲಿ, ಸೋಮವಾರ ತಡರಾತ್ರಿಯೂ ಉತ್ತರಾಖಂಡದ ಪರ್ವತ ಪ್ರದೇಶದಲ್ಲಿ 5.8 ತೀವ್ರತೆಯ ಭೂಕಂಪವುಂಟಾಗಿದ್ದು, ದಿಲ್ಲಿ ಮತ್ತು ಉತ್ತರ ಭಾರತದ ಇತರ ಭಾಗಗಳೂ ಕಂಪನಕ್ಕೆ ಸಾಕ್ಷಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News