ನೀರಿಗಾಗಿ ಬಂದ ಗೃಹಿಣಿಯರನ್ನು ಕಲ್ಲೆಸೆದು ಓಡಿಸಿದ ಕೊಳದ ಮಾಲಕ !

Update: 2017-02-12 10:00 GMT

 ನೆಡುಕಂಡಂ,ಫೆ. 12: ಖಾಸಗಿವ್ಯಕ್ತಿಯ ಕೊಳದಿಂದ ನೀರು ಸಂಗ್ರಹಿಸಲು ಬಂದಿದ್ದ ಮಹಿಳೆಯರನ್ನು ಕಲ್ಲೆಸೆದು ಓಡಿಸಿದ ಕೊಳದ ಮಾಲಕನ ವಿರುದ್ಧ ನೆಡುಕಂಡಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿತ್ತು. ಸಮೀಪದ ಐವರು ಗೃಹಿಣಿಯರು ಖಾಸಗಿ ವ್ಯಕ್ತಿಗೆ ಸೇರಿದ ಕೊಳದಿಂದ ನೀರು ತರಲು ಹೋಗಿದ್ದರು. ಕೊಳದ ಮಾಲಕ ಹತ್ತಿರದ ಶೆಡ್‌ನಲ್ಲಿ ಅಡಗಿ ಕೂತು ಕಲ್ಲೆಸೆದಿದ್ದಾನೆ.

  ಕಲ್ಲೆಸೆದದ್ದರಿಂದ ಹೆದರಿ ಓಡಿ ಹೋದ ರೇಣುಕಾ ಎನ್ನುವ ಮಹಿಳೆ ಸಮೀಪದಲ್ಲಿದ್ದ ಬಂಡೆಕಲ್ಲಿಗೆ ಢಿಕ್ಕಿಹೊಡೆದು ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ನೆಡುಕಂಡಂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಣುಕಾ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯಾಗಿದ್ದಾರೆ. ಸ್ಥಳೀಯ ಕೆಲವು ಕುಟುಂಬಗಳು ಬಹಳ ವರ್ಷಗಳಿಂದ ಈ ಕೊಳದಿಂದಲೇ ನೀರು ಸಂಗ್ರಹಿಸುತ್ತಿವೆ. ಆದರೆ ಕೆಲವು ದಿವಸಗಳ ಹಿಂದೆ ಕೊಳವಿರುವ ಜಮೀನಿನ ಮಾಲಕ ಇನ್ನು ಮುಂದೆ ನೀರು ತೆಗೆಯಬಾರದೆಂದು ಗೃಹಿಣಿಯರಿಗೆ ಎಚ್ಚರಿಕೆ ನೀಡಿದ್ದನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News