ಬೆಲೆಯೇರಿಕೆ ತಡೆಯಲು ಕೇರಳ ಸರಕಾರದಿಂದ ಅಕ್ಕಿ ಅಂಗಡಿಗಳು

Update: 2017-02-13 07:16 GMT

ತಿರುವನಂತಪುರಂ,ಫೆ. 12: ಸಾರ್ವಜನಿಕ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಯೇರಿಕೆಯನ್ನು ನಿಯಂತ್ರಿಸುವುದಕ್ಕಾಗಿ ಆಹಾರ ಇಲಾಖೆಯ ಅಧೀನದಲ್ಲಿ ಕೇರಳದಲ್ಲಿ ಅಕ್ಕಿಯ ಅಂಗಡಿಗಳನ್ನು ಕೇರಳ ಸರಕಾರ ಪ್ರಾರಂಭಿಸಲು ಮುಂದಾಗಿದೆ. ಯೋಜನೆಯ ರಾಜ್ಯಮಟ್ಟದ ಉದ್ಘಾಟನೆ ಸೋಮವಾರ ತಿರುವನಂತಪುರಂ ಮಣಕ್ಕಾಟ್‌ನಲ್ಲಿ ಆಹಾರ ಸಚಿವ ಪಿ. ತಿಲೋತ್ತಮನ್ ನಿರ್ವಹಿಸಲಿದ್ದಾರೆ. ಮೊದಲ ಹಂತದಲ್ಲಿ ತಿರುವನಂತಪುರಂ,ಕೊಚ್ಚಿ, ಕಲ್ಲಿಕೋಟೆ ಜಿಲ್ಲೆಗಳಲ್ಲಿಸರಕಾರ ಅಕ್ಕಿಯಂಗಡಿ ತೆರೆಯುತ್ತಿದೆ.

ಕೆಲವು ಸಾರ್ವಜನಿಕ ವಿತರಣಾ ಔಟ್‌ಲೆಟ್‌ಗಳಿಂದ ಅಕ್ಕಿಯನ್ನು ಪಡೆದು ಹೆಚ್ಚಿನ ದರಕ್ಕೆ ಮಾರಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಅಕ್ಕಿಯ ಅಂಗಡಿಗಳನ್ನು ಸರಕಾರ ತೆರೆಯಲು ನಿರ್ಧರಿಸಿದೆ ಎಂದು ಆಹಾರ ಸಚಿವಾಲಯದ ಕಚೇರಿ ಹೇಳಿಕೆ ನೀಡಿದೆ. ಸಪ್ಲೈಕೊ ಔಟ್‌ಲೆಟ್‌ಗಳ ಮೂಲಕ ವಿತರಣೆ ನಡೆಸುವ ಅದೇ ದರದಲ್ಲಿ ಅಕ್ಕಿಯನ್ನು ಈ ಅಂಗಡಿಗಳಲ್ಲಿಯೂ ಮಾರಲಾಗುವುದು. ಎಫ್‌ಸಿಐಯ ಓಪನ್ ಮಾರ್ಕೆಟ್ ಸ್ಕೇಲ್ ಸ್ಕೀಂ ಪ್ರಕಾರ ಖರೀದಿಸುವ ಅಕ್ಕಿಯನ್ನು ಮಾರಲಾಗುವುದು. 1400 ಟನ್ ಅಕ್ಕಿ ಎಫ್‌ಸಿಐಯಿಂದ ರಾಜ್ಯಸರಕಾರ ಖರೀದಿಸಿದೆ ಎಂದುವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News