×
Ad

ತಮಿಳುನಾಡು ರಾಜಕೀಯದಲ್ಲಿ ಕೇಂದ್ರ ಮಧ್ಯಪ್ರವೇಶಿಸಲು ಕಾರಣವಿಲ್ಲ: ರಿಜಿಜು

Update: 2017-02-13 16:05 IST

 ಹೊಸದಿಲ್ಲಿ,ಫೆ.13: ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಆ ರಾಜ್ಯದ ಆಂತರಿಕ ವಿಷಯವಾಗಿರುವುದರಿಂದ ಕೇಂದ್ರವು ಅದರಲ್ಲಿ ಮಧ್ಯಪ್ರವೇಶಿಸು ವುದಿಲ್ಲ ಎಂದು ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ಸೋಮವಾರ ಇಲ್ಲಿ ತಿಳಿಸಿದರು.

ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂವಿಧಾನಿಕ ವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಅಗತ್ಯ ಎನ್ನುವಂತಹ ಸ್ಥಿತಿ ತಮಿಳುನಾಡಿನಲ್ಲಿ ಉದ್ಭವಿಸಿದರೆ ಆಗ ಮಾತ್ರ ಕೇಂದ್ರ ಸರಕಾರವು ಕ್ರಮವನ್ನು ಕೈಗೊಳ್ಳುತ್ತದೆ ಎಂದರು.

ಖೋಟಾನೋಟು ವಿರುದ್ಧ ಕ್ರಮ

ಕಳೆದ ತಿಂಗಳು ಭಾರತ-ಬಾಂಗ್ಲಾದೇಶ ಗಡಿಗೆ ಸಮೀಪದ ಪ.ಬಂಗಾಲದ ಮಾಲ್ಡಾ ಜಿಲ್ಲೆಯಲ್ಲಿ 2,000 ರೂ.ಮುಖಬೆಲೆಯ ಖೋಟಾನೋಟುಗಳನ್ನು ವಶಪಡಿಸಿ ಕೊಂಡಿರುವ ಪ್ರಕರಣಗಳ ಕುರಿತಂತೆ ಅವರು, ಕೇಂದ್ರ ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಇದನ್ನು ತಡೆಯಲು ಕ್ರಮವನ್ನು ಕೈಗೊಳ್ಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News