×
Ad

​ಫೀಲ್ಡ್ ಗಿಳಿದ ಡಿಎಂಕೆ ...!

Update: 2017-02-15 11:36 IST

ಚೆನ್ನೈ, ಫೆ.15: ತಮಿಳುನಾಡಿನಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್  ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಲಿರುವ ಹಿನ್ನೆಲೆಯಲ್ಲಿ ವಿರೋಧಿ ಪಾಳಯದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದ್ದು, ವಿಪಕ್ಷ ಡಿಎಂಕೆ ಹೊಸ ಸರಕಾರ ರಚನೆಗೆ ಚಿಂತನೆ ನಡೆಸಿದೆ.

ಡಿಎಂಕೆಯ ಎಲ್ಲ ಶಾಸಕರು ಸಂಜೆ 5 ಗಂಟೆಯ ಒಳಗಾಗಿ ಚೆನ್ನೈಗೆ ಆಗಮಿಸುವಂತೆ ಪಕ್ಷದ ಕಾರ್ಯಾಧ್ಯಕ್ಷ ಎಂಕೆ ಸ್ಟಾಲಿನ್ ಸಂದೇಶ ರವಾನಿಸಿದ್ದಾರೆ.

ವಿಧಾನಸಭೆಯ ವಿಪಕ್ಷ ನಾಯಕರಾಗಿರುವ ಸ್ಟಾಲಿನ್  ತನ್ನ ಎರಡು ದಿನಗಳ ಕಾರ್ಯಕ್ರಮ ರದ್ದುಪಡಿಸಿ ಕೊಯಮತ್ತೂರಿನಿಂದ ಚೆನ್ನೈಗೆ ಆಗಮಿಸುತ್ತಿದ್ದಾರೆ. ಸಂಜೆಯ ಹೊತ್ತಿಗೆ ಡಿಎಂಕೆ ಶಾಸಕರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News