ಆಯಾಳನ್ನು ಪುಟ್ಟ ಮಕ್ಕಳ ಮುಂದೆಯೇ ಇರಿದು ಕೊಂದ ದುಷ್ಕರ್ಮಿಗಳು!
ಮನ್ನಾರ್, ಫೆ. 15: ಶಾಲೆಗೆ ಹೋಗುವ ವಯಸ್ಸಾಗದ ಸಣ್ಣಮಕ್ಕಳನ್ನು ಉಪಚರಿಸುವ ಸಂಸ್ಥೆಯ(ಕ್ರಷ್)ಲ್ಲಿ ಆ ಪುಟ್ಟಮಕ್ಕಳ ಮುಂದೆಯೇ ಆಯಾಳನ್ನು ದುಷ್ಕರ್ಮಿಗಳು ಕಡಿದು ಕೊಲೆಗೈದಿದ್ದಾರೆ. ಕಣ್ಣನ್ ದೇವನ್ ಕಂಪೆನಿಯ ಗುಂಡುಮಲೆ ಎಸ್ಟೇಟ್‌ನಕ್ರಷ್‌ನಲ್ಲಿ ಆಯಾ ಆಗಿರುವ ಬೆನ್‌ಮೋರ್ ಟೋಪ್ ಡಿವಿಷನ್‌ನ ಮಣಿಕುಮಾರ್‌ರ ಪತ್ನಿ ರಾಜಗುರು(47) ಎನ್ನುವ ಮಹಿಳೆ ದಾರುಣವಾಗಿ ಹತ್ಯೆಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನದ ವೇಳೆ ಊರನ್ನೆ ನಡುಗಿಸಿದ ಘಟನೆ ನಡೆದಿದೆ.
ಕ್ರಷ್‌ನಲ್ಲಿ ಝಾರ್ಕಂಡ್‌ನವರದ್ದೂ ಸೇರಿ ಹನ್ನೊಂದು ಮಕ್ಕಳಿದ್ದಾರೆ. ಆರು ತಿಂಗಳಿಂದ ಮೂರುವರ್ಷಗಳ ವರೆಗಿನ ಮಕ್ಕಳನ್ನು ಕ್ರಷ್‌ನಲ್ಲಿ ಬಿಟ್ಟು ಕಾರ್ಮಿಕರು ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಮಧ್ಯಾಹ್ನ ಅವರ ಮನೆಗೆ ಕರೆದು ಕೊಂಡು ಹೋಗುತ್ತಿದ್ದರು. ಮಂಗಳವಾರ 12:30ಕ್ಕೆ ಝಾಕಂಡ್‌ನ ಜವಾನಿ ಬೆಡ್ಯಿ ತನ್ನ ಮಗುವನ್ನು ಕರೆದು ಕೊಂಡು ಹೋಗಲು ಕ್ರಷ್‌ಗೆ ಬಂದಾಗ ಅದರ ಬಾಗಿಲುಮುಚ್ಚಿತ್ತು.ಕಿಟಿಕಿಯನ್ನೂ ಮುಚ್ಚಿತ್ತು. ನಂತರ ಹಿಂಬಾಗಿಲಿನ ಮೂಲಕ ಹೋಗಿ ನೋಡುವಾಗ ರಾಜಗುರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಮಕ್ಕಳು ಇನ್ನೊಂದು ಕೋಣೆಯಲ್ಲಿ ಆಡುತ್ತಿದ್ದವು.
ಇದನ್ನು ನೋಡಿ ಜವಾನಿ ಬೊಬ್ಬೆಹೊಡೆದ್ದರಿಂದ ಊರವರು ಒಟ್ಟುಗೂಡಿ ರಾಜಗುರುವನ್ನು ಕಂಪೆನಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ರಾಜಗುರು ಮೃತಪಟ್ಟರು.
ರಾಜಗುರುಗಳ ಹನ್ನೆರಡು ಪವನ್ ಚಿನ್ನದ ಸರ ಕಳ್ಳತನವಾಗಿದೆ. ತಲೆಯ ಹಿಂಭಾಗ ಮತ್ತು ಹಣೆಯ ಮೇಲೆ ಗಂಭೀರ ಗಾಯಗಳಾಗಿವೆ. ಕ್ರಷ್‌ನೊಳಗೆ ನುಗ್ಗಿದ ದುಷ್ಕರ್ಮಿಗಳು ರಾಜಗುರುರನ್ನು ಕಡಿದು ಕೊಲೆಮಾಡಿದ್ದಾರೆ. ನಂತರ ಬಾಗಿಲು ಮುಚ್ಚಿ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ.
ಇಡುಕ್ಕಿ ಎಸ್ಪಿ ಕೆ.ಬಿ. ವೇಣುಗೋಪಾಲ್‌ರ ನೇತೃತ್ವದಲ್ಲಿ ಮುನ್ನಾರ್ ಡಿವೈಸ್ಪಿ ಅನಿರುದ್ಧನ್, ಸಿಐ ಸ್ಯಾಂ ಜೋಸ್ . ಎಸ್ಸೈ ಜಿತೇಷ್ ತನಿಖೆಯನ್ನು ಆರಂಭಿಸಿದ್ದಾರೆ. ಸದಾ ಆಭರಣ ಧರಿಸಿ ಅಡ್ಡಾಡುವ ರಾಜಗುರುವಿನ ಪರಿಚಯವಿದ್ದವರೇ ಕೊಲೆನಡೆಸಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ ಎಂದು ವರದಿ ತಿಳಿಸಿದೆ.