×
Ad

​ಅಮ್ಮಾ ಸಮಾಧಿಗೆ ಮೂರು ಬಾರಿ ಕೈತಟ್ಟಿ ಚಿನ್ನಮ್ಮ ಶಪಥ...!

Update: 2017-02-15 12:19 IST

ಚೆನ್ನೈ, ಫೆ.15: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್‌ ಅವರು ಇಂದು ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಸಮಾಧಿ ಸಂದರ್ಶಿಸಿ ಪುಷ್ಪ ನಮನ ಸಲ್ಲಿಸಿದರು.

ಸಮಾಧಿಯ ಬಳಿ ಪುಷ್ಪ ನಮನ ಸಲ್ಲಿಸುವಾಗ ಅವರು ಭಾವುಕರಾದರು. ಸಮಾಧಿಗೆ ನಮನ ಸಲ್ಲಿಸಿ ಕೈ ಜೋಡಿಸಿ ಏನನ್ನೂ ಪಠಿಸಿದರು.  ಸಮಾಧಿಗೆ ಬಲಗೈಯಿಂದ ಮೂರು ಬಾರಿ ತಟ್ಟುವ ಮೂಲಕ ಶಪಥ ಕೈಗೊಂಡರು. 
ಶಶಿಕಲಾ ಅವರಿಗೆ ಇಳವರಸಿ ಮತ್ತು ಸುಧಾಕರನ್ ಸಾಥ್ ನೀಡಿದರು. 

ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ತೆರಲುವ ಮುನ್ನ ಶಶಿಕಲಾ ಅವರು ಪೋಯಸ್‌ ಗಾರ್ಡನ್ ನಿಂದ ತನ್ನ ಅಭಿಮಾನಿಗಳೊಂದಿಗೆ ಮರೀನಾ ಬೀಚ್ ನಲ್ಲಿ ಜಯಲಲಿತಾ ಸಮಾಧಿ ಬಳಿ ತೆರಳಿದರು. ಸಮಾಧಿಯ ಬಳಿ ಪುಷ್ಪ ನಮನ ಸಲ್ಲಿಸುವಾಗ ಅವರ ಮುಖದಲ್ಲಿ ದು:ಖ, ರೋಷ ಎಲ್ಲವೂ ಕಂಡು ಬಂತು. ಕೈ ಜೋಡಿಸಿ ಏನನ್ನೊ ಪಠಿಸಿದರು. ಬಳಿಕ ಬಾಗಿ ಕೈಯಿಂದ ಸಮಾಧಿಗೆ ತಟ್ಟಿದರು. ಇದೇ ರೀತಿ ಮೂರು ಬಾರಿ ನಮಿಸಿ ಬಲಗೈಯಿಂದ ತಟ್ಟಿ ಶಪಥ ಕೈಗೊಂಡರು.
ಮನೆ, ಕುಟುಂಬ, ಪಕ್ಷ ಎಲ್ಲವನ್ನು ಬಿಟ್ಟು ಪರಪ್ಪನ ಅಗ್ರಹಾರದಲ್ಲಿ ನಾಲ್ಕು ವರ್ಷಗಳ ಜೈಲುವಾಸ ಅನುಭವಿಸಲಿ ರುವ  ಶಶಿಕಲಾ ನಟರಾಜನ್‌ ತಾನು ಜೈಲಿನಿಂದ ವಾಪಸ್ ಬಂದು ಮತ್ತೆ ಜನರ ಸೇವೆ ಮಾಡುವ ಮತ್ತು  ತಮಿಳುನಾಡಿನ ಮುಖ್ಯ ಮಂತ್ರಿ ಹುದ್ದೆಗೇರುವ ಶಪಥ ಕೈಗೊಂಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. 

ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಶಶಿಕಲಾ ಅವರು ಅಲ್ಲಿಂದ  ರಾಮಾವರಂನಲ್ಲಿರುವ ಎಂ.ಜಿ.ರಾಮಚಂದ್ರನ್‌ ಅವರ ನಿವಾಸಕ್ಕೆ  ತೆರಳಿ  ಎಂ.ಜಿ.ರಾಮಚಂದ್ರನ್‌ ಫೋಟೊಗೆ ಹಾರ ಹಾಕಿ ನಮಿಸಿದರು. ಶಶಿಕಲಾ ಅಲ್ಲಿ ಸ್ವಲ್ಪ ಹೊತ್ತು ಧ್ಯಾನ ಮಾಡಿದರು. ಅಲ್ಲಿಂದ ಕಣ್ಣಿರುತ್ತಲೇ ಹೊರಟರು.ಜಯಲಲಿತಾ ಉಪಯೋಗಿಸುತ್ತಿದ್ದ ಕಾರಿನಲ್ಲೇ ನೇರವಾಗಿ ಬೆಂಗಳೂರಿಗೆ ತರಳಿದರು.  ಶಶಿಕಲಾ ಕಾರನ್ನು ಅವರ ಬೆಂಬಲಗರ ಕಾರು ಹಿಂಬಾಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News