ತಮಿಳ್ನಾಡಿನ ಬಿಕ್ಕಟ್ಟಿನಲ್ಲಿ ಕೇಂದ್ರಸಚಿವರ ಕೈವಾಡ: ಸುಬ್ರಮಣಿಯನ್ ಸ್ವಾಮಿ
Update: 2017-02-15 13:36 IST
ಚೆನ್ನೈ,ಫೆ. 15: ತಮಿಳ್ನಾಡಿನ ಈಗಿನ ರಾಜಕೀಯ ಬಿಕ್ಕಟ್ಟಿನ ಹಿಂದೆ ಇಬ್ಬರು ಕೇಂದ್ರ ಸಚಿವರು ಕೈಯಾಡಿಸಿದ್ದಾರೆಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.ಇವರ ಹೆಸರುಗಳನ್ನು ಸಂದರ್ಭ ಬಂದಾಗ ತಾನು ಬಹಿರಂಗಪಡಿಸುವೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅನಧಿಕೃತ ಆಸ್ತಿ ಪ್ರಕರಣದಲ್ಲಿ ಶಶಿಕಲಾರನ್ನು ಸುಪ್ರೀಂಕೋರ್ಟು ನಾಲ್ಕುವರ್ಷಕ್ಕೆ ಶಿಕ್ಷಿಸಿರುವ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ನಿಧನರಾದ ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾ, ಶಶಿಕಲಾರ ವಿರುದ್ಧ ಅನಧಿಕೃತ ಆಸ್ತಿ ಸಂಪಾದನೆ ಕೇಸನೊಂದಿಗೆ ಸುಬ್ರಮಣಿಯನ್ ಸ್ವಾಮಿ ಹೋರಾಡಿದ್ದರು. ತಮಿಳ್ನಾಡಿನ ಹೊಣೆಯಿರುವ ರಾಜ್ಯಪಾಲ ವಿದ್ಯಾಸಾಗರ್ ರಾವ್ ತನ್ನ ಹೊಣೆನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಸ್ವಾಮಿ ಟೀಕಿಸಿದ್ದಾರೆಂದು ವರದಿ ತಿಳಿಸಿದೆ.